ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ
ಕನ್ನಡಪ್ರಭ ವಾರ್ತೆ, ಗದಗ, ಮಾ. 18
ಗದಗ-ಬೆಟಗೇರಿ ಅವಳಿ ನಗರದಲ್ಲಿನ ನೀರಿನ ಸಮಸ್ಯೆ ಪರಿಹರಿಸಲು, ಸ್ವಚ್ಛತೆ, ಮೂಲ ಸೌಲಭ್ಯ ಒದಗಿಸಲು ಆದ್ಯತೆ ನೀಡುವುದಾಗಿ ನಗರಸಭೆ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ ಹೇಳಿದರು.
ನಗರದ 20ನೇ ವಾರ್ಡ್‌ನ ನಾಗಲಿಂಗ ನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಈಚೆಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಗರದಲ್ಲಿ ನೀರಿನ ಸಮಸ್ಯೆ ಹಲವು ವರ್ಷಗಳಿಂದ ಇದೆ. ಅಧಿಕಾರಾವಧಿಯಲ್ಲಿ ತಕ್ಕಮಟ್ಟಿಗೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ ಅವರು, ಅವಳಿ ನಗರದ ಅಭಿವೃದ್ಧಿ ಕಾರ್ಯಗಳಿಗೆ ಜನತೆ ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಕೃಷ್ಣಾ ಪರಾಪುರ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಸುರೇಶ ಕಲಬುರ್ಗಿ, ಉಪಾಧ್ಯಕ್ಷ ಶಿವು ಅಣ್ಣಿಗೇರಿ, ಕಾರ್ಯದರ್ಶಿ ಮಾರುತಿ ದುಂಡಸಿ, ಸಂಘಟನಾ ಕಾರ್ಯದರ್ಶಿ ಬೈರವಾಡೆ, ಹನುಮಂತಪ್ಪ ಮುಂಡರಗಿ, ದಾವಲಸಾಬ ಈಟಿ, ಕಳಕಪ್ಪ ರೇವಡಿ, ಆಂಜಿಖಾನೆ, ಹನುಮಂತಪ್ಪ ಕದಡಿ, ಬಸವರಾಜ ಬಳ್ಳಾರಿ, ಅಶೋಕ ರೇವಡಿ, ಖಾಜಾಸಾಬ ಉಮಚಗಿ, ಖಾನಸಾಬ ಬಳ್ಳಾರಿ, ಮಲ್ಲಪ್ಪ ಆಡಿನ, ಸುಭಾಸ ದಾನಪ್ಪನವರ, ಮಂಜು ಬೈಲಗುಡ್ಡ, ಮಹಾಂತೇಶ ಬೈರವಾಡೆ, ಸುರೇಶ ಅಂಜಿಖಾನೆ, ಯಲ್ಲಪ್ಪ ಅಂಜಿಖಾನೆ, ಶಿವಕುಮಾರ ಹೂಗನೂರ, ಖಾನಸಾಬ ಬಳ್ಳಾರಿ, ಸುಭಾಸ ದ್ಯಾವನವರ, ಶಿರಾಜ ಯಕ್ಲಾಸಪುರ, ಅಲ್ತಾಫ್ ಈಟಿ, ನಾರಾಯಣಪ್ಪ ಜಡಿ, ಮಹಾಂತೇಶ ಅಂಜಿಖಾನೆ, ಹನುಮಂತಪ್ಪ ಚನ್ನದಾಸರ, ಲೋಕೇಶ ಬೈರವಾಡೆ, ಮಾಬುಸಾಬ ಶೇಖ, ಶಟವಾಜಿ ಬೈರವಾಡೆ, ಯಮನೂರ ಬೈರವಾಡೆ, ದೇವರಾಜ ಕುರ್ತಕೋಟಿ, ಗಿರೀಶ ಬೈರವಾಡೆ ಮುಂತಾದವರು ಉಪಸ್ಥಿತರಿದ್ದರು. ರಾಜು ಖಾನಾಪುರ ಸ್ವಾಗತಿಸಿ, ನಿರೂಪಿಸಿದರು.
--
23ರಿಂದ ಮಾನವ ಹಕ್ಕು ಆಯೋಗ ಸದಸ್ಯರ ಪ್ರವಾಸ
ಗದಗ: ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯ ಸಿ.ಜಿ. ಹುನಗುಂದ ಅವರು ಆಯೋಗದ ರಜಿಸ್ಟ್ರಾರ್ ಆಗಿರುವ ಕೆ.ಎಚ್. ಮಲ್ಲೇಶಪ್ಪ ಅವರೊಂದಿಗೆ ಮಾ. 23ರಂದು ಹುಬ್ಬಳ್ಳಿಯಿಂದ ಸಂಜೆ 5.30ಕ್ಕೆ ಗದಗ ಆಗಮಿಸಿ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಮಾಡುವರು. 24ರ ಬೆಳಗ್ಗೆ 9ರಿಂದ 12ರ ವರೆಗೆ ವಿವಿಧೆಡೆ ಭೇಟಿ ನೀಡಿ ಮಧ್ಯಾಹ್ನ 12ರಿಂದ 1ರವರೆಗೆ ಗದಗ ಸರ್ಕ್ಯೂಟ್ ಹೌಸ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ವಿಷಯಗಳ ದೂರು, ಅಹವಾಲು ಸಾರ್ವಜನಿಕರಿಂದ ಸ್ವೀಕರಿಸುವರು. ಮಧ್ಯಾಹ್ನ 3ರಿಂದ 4ರ ವರೆಗೆ ಜಿಲ್ಲಾಡಳಿತ ಅಧಿಕಾರಿಗಳೊಂದಿಗೆ ಮಾನವ ಹಕ್ಕುಗಳ ರಕ್ಷಣೆ ಕುರಿತ ಸಭೆ ಜರುಗಿಸಿ ನಂತರ ದಾವಣಗೆರೆಗೆ ಪ್ರಯಾಣಿಸುವರು ಎಂದು ಪ್ರಕಟಣೆ ತಿಳಿಸಿದೆ.