ಪು.ಬಡ್ನಿಯಲ್ಲಿ ಮತದಾನ ಜಾಗೃತಿ ಜಾಥಾ
ಲಕ್ಷ್ಮೇಶ್ವರ: ಮತದಾನ ಪ್ರತಿ ನಾಗರಿಕನ ಹಕ್ಕು, ನಿಮ್ಮ ಮತ ವ್ಯರ್ಥವಾಗಲು ಬಿಡಬೇಡಿ, ಹಣ ಹೆಂಡದ ಆಮಿಷಕ್ಕೆ ನಿಮ್ಮ ಮತ ಮಾರಬೇಡಿ, ಏನಾದರೂ ಆಗಲಿ ನಿಮ್ಮ ಹಕ್ಕು ಚಲಾಯಿಸದೆ ಇರಬೇಡಿ ಎಂದು ಶಾಲಾ ಮಕ್ಕಳು ಬಿತ್ತಿ ಚಿತ್ರಗಳನ್ನು ಹಿಡಿದುಕೊಂಡು ಓಣಿ ಓಣಿಯಲ್ಲಿ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದ ದೃಶ್ಯ ಸಮೀಪದ ಪುಟಗಾವಂ ಬಡ್ನಿಯಲ್ಲಿ ಮಂಗಳವಾರ ಕಂಡು ಬಂದಿತು.
ಪು.ಬಡ್ನಿಯ ಗ್ರಾಮ ಪಂಚಾಯಿತಿ, ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆ ಬಡ್ನಿ ಇವುಗಳ ಸಂಯುಕ್ತವಾಗಿ ಮತದಾನ ಜಾಗೃತಿ ಜಾಥಾವನ್ನು ಆಯೋಜಿಸಿದ್ದು ಪು,ಬಡ್ನಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಾದ ಹಿರೆಮಲ್ಲಾಪುರ ಹಾಗೂ ಅಮರಾಪುರಗಳಲ್ಲಿ ಮತದಾನ ಜಾಗೃತಿ ಜಾಥಾವನ್ನು ಆಯೋಜಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಎಚ್. ಹಾವೇರಿಪೇಟೆ, ಕಾರ್ಯದರ್ಶಿ ಯು.ಎಚ್. ಬಾರಕೇರ, ಗ್ರಾಮ ಪಂಚಾಯಿತಿಯ ಸಿಬ್ಬಂದಿ ಸಿದ್ದು ಹರದಗಟ್ಟಿ, ರಮೇಶ ಅಣ್ಣಿಗೇರಿ, ದೇವಪ್ಪ ಲಮಾಣಿ, ಪ್ರೌಢಶಾಲೆಯ ಶಿಕ್ಷಕ ಎ.ಎನ್. ನದಾಫ್, ಎಸ್.ಕೆ. ಪ್ಯಾಟಿಗೌಡರ, ಬಡ್ನಿ ಗ್ರಾಮದ ಗ್ರಂಥಪಾಲಕ ಕರೆಣ್ಣವರ ಮುಂತಾದವರು ಹಾಜರಿದ್ದರು.