ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಯಶ್ರೀ ಹೊಸಮನಿಗೆ ಸನ್ಮಾನ

Lingaraj Badiger
Updated On : 21 Mar 2014, 11:59 am

ಲಕ್ಷ್ಮೇಶ್ವರ: ಮಹಿಳೆಗೆ ನೀಡುವ ಪ್ರೋತ್ಸಾಹದಿಂದ ಉನ್ನತ ಸಾಧನೆ ಮಾಡಬಹುದಾಗಿದೆ ಎಂದು ಕದಳಿ ಮಹಿಳಾ ವೇದಿಕೆಯ ಗದಗ ಜಿಲ್ಲಾ ಅಧ್ಯಕ್ಷೆ ಪ್ರೇಮಕ್ಕ ಬಿಂಕದಕಟ್ಟಿ ಹೇಳಿದರು. ಮಂಗಳವಾರ ಸಂಜೆ ಪಟ್ಟಣದ ಶಿಕ್ಷಕ ಮಲ್ಲಿಕಾರ್ಜುನ ಹೊಸಮನಿ ಅವರ ನಿವಾಸದಲ್ಲಿ ಜಯಶ್ರೀ ಹೊಸಮನಿ ಡಾಕ್ಟರೇಟ್ ಪದವಿ ಪಡೆದಿರುವುದಕ್ಕೆ ಕದಳಿ ಮಹಿಳಾ ವೇದಿಕೆ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಪರವಾಗಿ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಲಿಂ.ಜ. ವೀರಗಂಗಾಧರ ಸ್ವಾಮಿಗಳ ಜೀವನ ಚರಿತ್ರೆ ಕುರಿತು ಮಂಡಿಸಿರುವ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ಪಡೆದಿರುವ ಜಯಶ್ರೀ ಹೊಸಮನಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಹಿಳೆ ದೊಡ್ಡ ಸಾಧನೆ ಮಾಡುವುದಕ್ಕೆ ಅವರ ಮನೆಯಲ್ಲಿನವರ ಸಹಕಾರ ಕಾರಣವಾಗುತ್ತದೆ ಎಂದರು. ಮಹಿಳಾ ವೇದಿಕೆಯ ಶಕುಂತಲಾ ತಟ್ಟಿ, ಲತಾ ತಟ್ಟಿ, ಜಯಶ್ರೀ ಮೆಳ್ಳಿಗೇರಿ, ಶಕುಂತಲಾ ಮುಂಜಿ, ನೀಲಕ್ಕ ಬೂದಿಹಾಳ, ಮಹಾನಂದಾ ಕೊಣ್ಣೂರು, ಪಾರ್ವತಿ ಕಳ್ಳಿಮಠ, ಶಾರದಾ ಮಹಾಂತಶೆಟ್ಟರ, ಚನ್ನಪ್ಪ ಕೋಲಕಾರ, ಮಲ್ಲಿಕಾರ್ಜುನ ಹೊಸಮನಿ, ನಿರ್ಮಲಾ ಅರಳಿ, ಕೋಮಲಾ ಗಿರಡ್ಡಿ, ಆರುಂಧತಿ ಬಿಂಕದಕಟ್ಟಿ, ಮಲ್ಲಪ್ಪ ಹಂಚಿನಾಳ, ಪ್ರತಿಮಾ ಮಹಾಜನಶೆಟ್ಟರ, ಶಕುಂತಲಾ ಹೊರಟ್ಟಿ, ಶಂಕ್ರಮ್ಮ ಗೂಳೇರ, ರಮಾಬಾಯಿ ಕುಲಕರ್ಣಿ, ಲಕ್ಷ್ಮವ್ವ ಆಚಾರ, ವಿಜಯಲಕ್ಷ್ಮಿ ಉಪನಾಳ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement