ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಹಿಳೆಯರು ಮೌಢ್ಯದಿಂದ ಹೊರಬರಲಿ

Lingaraj Badiger
Updated On : 21 Mar 2014, 12:04 pm

ಮುಂಡರಗಿ: ಗ್ರಾಮೀಣ ಮಹಿಳೆಯರು ಮೌಢ್ಯತೆಯಿಂದ ಹೊರಬಂದು ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಂಡಲ್ಲಿ ಅವರ ಬದುಕು ಇನ್ನಷ್ಟು ಹಸನಾಗುತ್ತದೆ ಎಂದು ಕರ್ನಾಟಕ ವಿಜ್ಞಾನ ಪರಿಷತ್‌ನ ರಾಜ್ಯಾಧ್ಯಕ್ಷ ಪ್ರಾ. ಎಸ್.ವಿ. ಸಂಕನೂರ ಹೇಳಿದರು.
ಅವರು ಜ.ಅನ್ನದಾನ ವಿದ್ಯಾ ಸಮಿತಿಯ ಸಭಾಭವನದಲ್ಲಿ ಅಕ್ಷರ ದಾಸೋಹ ಕಾರ್ಯಕರ್ತೆಯರಿಗಾಗಿ ಈಚೆಗೆ ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರದಲ್ಲಿ ವಿಜ್ಞಾನದ ನಡಿಗೆ ಜನರ ಕಡೆಗೆ ಕುರಿತು ಉಪನ್ಯಾಸ ನೀಡಿದರು. ಗ್ರಾಮೀಣ ಮಹಿಳೆಯರು ಅನೇಕ ಮೂಢನಂಬಿಕೆಗಳ ದಾಸರಾಗಿ ತಮ್ಮ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿಕೊಳ್ಳುತ್ತಿದ್ದಾರೆ. ಹಳ್ಳಿಯ ಮಹಿಳೆಯರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನದ ನಡಿಗೆ ಜನರ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಹಾಕಿಕೊಂಡು ಜಾಗೃತಿ ಮೂಡಿಸುತ್ತಿದೆ ಎಂದರು. ಕಾರ್ಯಾಗಾರ ಉದ್ಘಾಟಿಸಿದ ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಜಿಲ್ಲಾ ಅಕ್ಷರ ದಾಸೋಹ ಯೋಜನಾಧಿಕಾರಿ ಮಂಗಳಾ ತಾಪಸ್ಕರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಚಲನಚಿತ್ರ ನಟ, ನಿರ್ದೇಶಕ ರಾಜು ಬದಾಮಿ ಅವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಜರುಗಿತು. ಡಾ. ಎಸ್.ವಿ. ಪರಪ್ಪನವರ ಆರೋಗ್ಯ ಮತ್ತು ಮಾತ್ರೆಗಳ ಸೇವನೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾತನಾಡಿದರು. ವಿಜ್ಞಾನ ಪರಿಷತ್‌ನ ಉಪಾಧ್ಯಕ್ಷ ಎ.ವಿ. ಹಿರೇಮಠ, ಎ.ವಿ. ಹಳ್ಳಕೇರಿ, ಜ. ಅನ್ನದಾನ ವಿದ್ಯಾ ಸಮಿತಿಯ ವಿಶೇಷ ಅಧಿಕಾರಿ ಎಸ್.ಎಂ. ಹೊಸಮಠ, ಆರ್.ಬಿ. ಮುಳ್ಳಳ್ಳಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ. ಸಂಸಿ, ಹನುಮಂತ ಮಸಾಲಿ, ಶ್ರೀಕಾಂತ ರಾಠೋಡ ಮುಂತಾದವರು ಉಪಸ್ಥಿತರಿದ್ದರು. ತರಬೇತಿ ಕಾರ್ಯಾಗಾರದಲ್ಲಿ 350 ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement