ಕಜ್ಜರಿ: ಮತದಾನ ಬಹಿಷ್ಕಾರದ ನಿರ್ಣಯ
ರಾಣಿಬೆನ್ನೂರು: ದೇಶ ಸ್ವಾತಂತ್ರ್ಯಗೊಂಡು 66 ವರ್ಷ ಕಳೆದರೂ ಬಸ್ ಕಾಣದ ಊರೆಂಬ ಖ್ಯಾತಿಗೆ ಕಾರಣವಾಗಿರುವ ತಾಲೂಕಿನ ಕಜ್ಜರಿ ಗ್ರಾಮಸ್ಧರು ತಮ್ಮ ಊರಿಗೆ ತಾಲೂಕು ಕೇಂದ್ರ ಸ್ಥಾನದಿಂದ ಬಸ್ ಸಂಪರ್ಕ ಕಲ್ಪಿಸಬೇಕೆಂದು ಒತ್ತಾಯಿಸಿ ಹಲವಾರು ಬಾರಿ ತಾವು ಮತ ನೀಡುವ (ಬ್ಯಾಡಗಿ ವಿಧಾನಸಭಾ ಕ್ಷೇತ್ರದ) ಶಾಸಕ ಬಸವರಾಜ ಶಿವಣ್ಣನವರಿಗೆ ಹಾಗೂ ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡರಿಗೆ ತಿಳಿಸಿದರು ಪ್ರಯೋಜನವಾಗಿಲ್ಲ. ಆದ್ದರಿಂದ ಏ. 17ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಮುಂದಾಗಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.