ಸಲೀಂ ಅಹ್ಮದ್ ಬಿರುಸಿನ ಪ್ರಚಾರ
ಹಾವೇರಿ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಶುಕ್ರವಾರ ಕ್ಷೇತ್ರದ ವಿವಿಧೆಡೆ ಸಂಚರಿಸಿ ಬಿರುಸಿನ ಪ್ರಚಾರ ಕೈಗೊಂಡರು. ಅವರ ಪರವಾಗಿ ಶಾಸಕ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ಕಾರ್ಯಕರ್ತರೂ ನಗರದಲ್ಲಿ ಪ್ರಚಾರ ಕೈಗೊಂಡರು.
ನಗರದ ವಾರ್ಡ್ ನಂ 1, 2, 6ರಲ್ಲಿ ಸಲೀಂ ಅಹ್ಮದ್ ಪರವಾಗಿ ಹಾವೇರಿ ಬ್ಲಾಕ್ ಅಧ್ಯಕ್ಷ ಎಂ.ಎಂ. ಹಿರೇಮಠ, ಪ್ರಭುಗೌಡ ಬಿಸ್ಟನಗೌಡ್ರ ಮತ್ತು ಶಾಸಕ ರುದ್ರಪ್ಪ ಎಂ. ಲಮಾಣಿ ನೇತೃತ್ವದಲ್ಲಿ ಮನೆಮನೆಗೆ ತೆರಳಿ ಪ್ರಚಾರ ಕೈಗೊಂಡರು.
ಮುಖಂಡರಾದ ಎಸ್.ಎಫ್.ಎನ್. ಗಾಜಿಗೌಡ್ರ, ಕೊಟ್ರೆಶಪ್ಪ ಬಸೇಗಣ್ಣಿ, ಈರಪ್ಪ ಲಮಾಣಿ, ಶಿವಕುಮಾರ ತಾವರಗಿ, ಬೆಟಗೇರಿ ಜಗದೀಶ, ದಾಸಪ್ಪ ಕರ್ಜಗಿ, ಜಗದೀಶ ಬಸೇಗಣ್ಣಿ, ಶ್ರೀಧರ ದೊಡ್ಮನಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಂದ್ರಾಳ, ಅಪ್ಪಾಲಾಲ ಯಾದವಾಡ, ಜಿಲ್ಲಾ ವಕ್ಫ್ ಕಮಿಟಿ ಅಧ್ಯಕ್ಷ ಸುಬಾನಿ ಚೂಡಿಗಾರ, ಶಿವಬಸಪ್ಪ ಹಲಗಣ್ಣನವರ, ಶಹನವಾಜ ಅಗಡಿ, ಅಜ್ಜಯ್ಯ ಹಿರೇಮಠ, ಅನ್ವರ ಚಿಮ್ಮಲಗಿ, ವಾಲ್ಮೀಕಿ ಸಮಾಜದ ಅಧ್ಯಕ್ಷ ಹೊನ್ನಪ್ಪ ದೊಡ್ಮನಿ, ಜಯಶ್ರೀ ಶಿವಪುರ, ಲಲಿತಾ ಹುಗ್ಗಿ, ಶಶಿಕಲಾ ಹಿರೇಮಠ, ದ್ಯಾಮಣ್ಣ ಅರಿಶಿನಾಳ, ಚಂದ್ರು ಅರೇಪಲ್ಲಿ, ಉಮೇಶ ಶಾಂತಗಿರಿ, ಉಳವೇಶ ಹಲಗಣ್ಣನವರ ಹಾಗೂ ನಗರಸಭೆ ಅಧ್ಯಕ್ಷ ಐ.ಯು. ಪಠಾಣ, ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ಸದಸ್ಯರಾದ ಸಂಜೀವ ಕುಮಾರ ನೀರಲಗಿ, ಮಲ್ಲೇಶಪ್ಪ ಪಟ್ಟಣಶೆಟ್ಟಿ, ಸುನೀಲ ಜಮಾದಾರ, ಹನುಮಂತಪ್ಪ ಶರಸೂರಿ, ಪಾರ್ವತಮ್ಮ ಹಲಗಣ್ಣನವರ, ರಮೇಶ ಕಡಕೋಳ ಇತರರು ಇದ್ದರು.