ಚುನಾವಣಾ ಪ್ರಚಾರಕ್ಕಾಗಿ ಏ. 7ರಂದು ಜಿಲ್ಲೆಗೆ ಸಿಎಂ ಭೇಟಿ: ಗಡ್ಡದೇವರಮಠ
ಗದಗ: ಏ. 7ರಂದು ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸಲಿದ್ದು, ಜಿಲ್ಲೆಯ 2 ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ಸಭೆ ನಡೆಸುವ ಕುರಿತು ಸದ್ಯದಲ್ಲಿಯೇ ಸಮಯ ಹಾಗೂ ಸ್ಥಳ ನಿಗದಿ ಮಾಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಹೇಳಿದರು.
ಅವರು ಶನಿವಾರ ನಗರದ ಕಾಟನ್‌ಸೇಲ್ ಸೊಸೈಟಿ ಆವರಣದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಾ. 30ರಂದು ಜಿಲ್ಲೆಗೆ ಆಗಮಿಸುವ ಅಭ್ಯರ್ಥಿ ಸಲೀಂ ಅಹ್ಮದ್ ಗದಗ, ರೋಣ, ಮುಂಡರಗಿ, ಶಿರಹಟ್ಟಿ ಭಾಗದ ಮಠ, ಮಂದಿರ ಹಾಗೂ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಏ. 2ರಂದು ಗದಗ ಹಾಗೂ ರೋಣ ತಾಲೂಕಿನಲ್ಲಿ, 3ರಂದು ಡಂಬಳ, ಮುಂಡರಗಿ, ಲಕ್ಷ್ಮೇಶ್ವರ, ಶಿರಹಟ್ಟಿ ಹೋಬಳಿಗಳಲ್ಲಿ ಪ್ರಚಾರ ಮಾಡಲಿದ್ದು, ಒಟ್ಟು 3 ಸುತ್ತಿನ ಪ್ರಚಾರ ನಡೆಸಲಾಗುವುದು. ತಡವಾಗಿ ಅಭ್ಯರ್ಥಿ ಘೋಷಣೆಯಾಗಿರುವ ಕಾರಣ ಪ್ರಚಾರ ಕಾರ್ಯಕ್ಕೆ ತೀವ್ರತೆ ನೀಡಬೇಕಿದೆ ಶ್ರೀರಕ್ಷೆಯಾಗಿವೆ ಎಂದರು. ಮಾಜಿ ಶಾಸಕ ಡಿ.ಆರ್. ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿರಹಟ್ಟಿ ಮಾಜಿ ಶಾಸಕ ಎಸ್.ಎನ್. ಪಾಟೀಲ, ಮದನಲಾಲ ಬಾಫಣಾ, ವೀರೇಂದ್ರ ಪಾಟೀಲ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಸಭೆಯಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ, ಪರಪ್ಪ ಬಂದಕ್ಕನವರ, ವಾಸಣ್ಣ ಕುರುಡಗಿ, ಶಾರದಾ ತೋಟದ ಹಾಜರಿದ್ದರು.