ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೈ ವಿಸರ್ಜನೆಗೆ ತೀರ್ಮಾನ

Mainashree
Updated On : 30 Mar 2014, 11:47 am

ಗದಗ: ದೇಶದ ಜನತೆ ಕಾಂಗ್ರೆಸ್ ಆಡಳಿತದಿಂದ ಬೇಸತ್ತಿದ್ದು, ದೇಶಾದ್ಯಂತ ಕಾಂಗ್ರೆಸ್‌ನ್ನು ಸೋಲಿಸುವ ಮೂಲಕ ವಿಸರ್ಜನೆಗೆ ತೀರ್ಮಾನಿಸಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ಭಾನುವಾರ ಸಂಜೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತ ಗೆಲ್ಲಿಸಿ ಬೃಹತ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದ ಜನತೆ ಸಮರ್ಥ ನಾಯಕನ ಹುಡುಕಾಟದಲ್ಲಿದೆ. ವಾಜಪೇಯಿ ಹಾಗೂ ಡಾ.ಅಬ್ದುಲ್ ಕಲಾಂ ಅವರ ಕನಸಾದ 2020ರ ವೇಳೆಗೆ ದೇಶವನ್ನು ಸೂಪರ್ ಪವರ್ ದೇಶವನ್ನಾಗಿ ರೂಪಿಸಲು ಮೋದಿಯಂತಹ ನಾಯಕರ ಅವಶ್ಯಕತೆ ದೇಶಕ್ಕಿದೆ. ಇದನ್ನು ದೇಶದ ಕೋಟ್ಯಾಂತರ ಸಂಖ್ಯೆಯ ಯುವಕರು ಒಪ್ಪಿದ್ದಾರೆ. ರಾಜ್ಯದಲ್ಲಿ ಕೃಷಿ ಬಜೆಟ್, ರೈತರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ಹತ್ತಾರು ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತಂದು ಫಲಪ್ರದವಾದ ಹಿನ್ನೆಲೆಯಲ್ಲಿ ಈ ಎಲ್ಲಾ ಯೋಜನೆಗಳನ್ನು ಕೇಂದ್ರದ ಮೋದಿ ನೇತೃತ್ವ ಸರ್ಕಾರದಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ನಾವು ಲೋಕಸಭೆಗೆ ಸ್ಪರ್ಧಿಸಿದ್ದೇವೆ ಎಂದರು. ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ದೇಶದ ಯುವಕರ ಭವಿಷ್ಯ ಹಾಗೂ ಐಕ್ಯತೆ ಬೆಳೆಸಲು ರೈತರು, ಶ್ರಮಿಕರಿಗೆ ಉತ್ತಮ ಬದುಕು ಕಲ್ಪಿಸುವ ನಿಟ್ಟಿನಲ್ಲಿ ನೀವು ಮೋದಿ ಅವರ ಬೆಂಬಲಕ್ಕೆ ನಿಲ್ಲಬೇಕಿದೆ. ಈ ಹಿಂದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಹಲವಾರು ದೇಶಭಕ್ತರ ಆತ್ಮಕ್ಕೆ ಶಾಂತಿ ಸಿಗಬೇಕಾದಲ್ಲಿ ಮೋದಿಯ ನಾಯಕತ್ವ ಅವಶ್ಯಕ, ಸದ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೌಪ್ಯ ಮತದಾನದ ಮೂಲಕ ನೀವೆಲ್ಲಾ ಮತ್ತೊಮ್ಮೆ ದೇಶವನ್ನು ಕಾಂಗ್ರೆಸ್‌ನ ಮುಕ್ತ ಮಾಡಬೇಕಿದೆ ಎಂದರು.
ಬಿಎಸ್‌ಆರ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಗದಗ ಜಿಲ್ಲೆಯ ಜನತೆಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಜಿಲ್ಲೆಯಲ್ಲಿ ಗೌಡರ ಪ್ರೈವೇಟ್ ಕ್ಯಾಬಿನೇಟ್ ಎಲ್ಲಾ ವಿಭಾಗಗಳಲ್ಲಿಯೂ ನಡೆಯುತ್ತಿದೆ. ಲೋಕಸಭಾ ಚುನಾವಣೆಗೂ ಅವರು ಸ್ಪರ್ಧಿಸುವ ತವಕದಲ್ಲಿದ್ದರು. ಪ್ರತಿಯೊಂದು ಅಕ್ರಮದಲ್ಲಿಯೂ ಗೌಡರು ಹಾಗೂ ಅವರ ಸಂಬಂಧಿಗಳು ಜೋರಾಗಿ ಕೆಲಸ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲು ನಾವೆಲ್ಲಾ ಸನ್ನದ್ದರಾಗಿದ್ದೇವೆ ಎಂದರು.
ಅಭ್ಯರ್ಥಿ ಶಿವಕುಮಾರ ಉದಾಸಿ, ಬಾಗಲಕೋಟ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ, ಶ್ರೀಶೈಲಪ್ಪ ಬಿದರೂರ ಮುಂತಾದವರು ಮಾತನಾಡಿದರು. ಸಭೆಯಲ್ಲಿ ಸಿ.ಸಿ. ಪಾಟೀಲ, ಬಸವರಾಜ ಬೊಮ್ಮಾಯಿ, ಸಿ.ಎಂ. ಉದಾಸಿ, ಕಳಕಪ್ಪ ಬಂಡಿ, ಸಿ.ಎಸ್. ಮುತ್ತಿನಪೆಂಡಿಮಠ, ರಾಮಣ್ಣ ಲಮಾಣಿ, ಎಂ.ಎಸ್. ಕರಿಗೌಡ್ರ, ಅಶೋಕ ಕಾಟವೆ, ಮೋಹನ ಲಿಂಬಿಕಾಯಿ, ಸಣ್ಣವೀರಪ್ಪ ಹಳ್ಳೆಪ್ಪನವರ,  ಜಯಶ್ರೀ ಹಳ್ಳೆಪ್ಪನವರ  ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement