ಪರೀಕ್ಷೆ: 642 ವಿದ್ಯಾರ್ಥಿಗಳು ಹಾಜರು
ರೋಣ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಅಡಿ ಕೇಂದ್ರ ಪುರಷ್ಕೃತ ಯೋಜನೆಯ ಆದರ್ಶ ವಿದ್ಯಾಲಯಗಳ 2014-2015ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಭಾನುವಾರ ನಡೆಯಿತು. ಪ್ರವೇಶ ಪರೀಕ್ಷೆಯಲ್ಲಿ ತಾಲೂಕಿನಿಂದ ಒಟ್ಟು 643 ವಿದ್ಯಾರ್ಥಿಗಳು ಹಾಜರಾಗಿದ್ದರು.
ಒಟ್ಟು 670 ವಿದ್ಯಾರ್ಥಿಗಳು ಪರೀಕ್ಷೆಗಾಗಿ ಹೆಸರು ನೋಂದಾಯಿಸಿದ್ದು, ಅದರಲ್ಲಿ 643 ವಿದ್ಯಾರ್ಥಿಗಳು ಹಾಜರಾಗಿದ್ದು, 27 ವಿದ್ಯಾರ್ಥಿಗಳು ಗೈರಾಗಿದ್ದರು.
ಪಟ್ಟಣದ ವಿ.ಎಫ್. ಪಾಟೀಲ್ ಪ್ರೌಢಶಾಲೆಯಲ್ಲಿ ಒಟ್ಟು 302 ವಿದ್ಯಾರ್ಥಿಗಳಲ್ಲಿ 290 ವಿದ್ಯಾರ್ಥಿಗಳು ಹಾಜರಿದ್ದು, 12 ವಿದ್ಯಾರ್ಥಿಗಳು ಗೈರಾಗಿದ್ದರು. ಮಾತೋಶ್ರೀ ಬಸಮ್ಮ ಎಸ್. ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 368 ವಿದ್ಯಾರ್ಥಿಗಳಲ್ಲಿ 353 ವಿದ್ಯಾರ್ಥಿಗಳು ಹಾಜರಾಗಿ, 15 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಬಿಇಒ ಡಿ.ಐ. ಅಸುಂಡಿ ತಿಳಿಸಿದರು.