ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

Mainashree
Updated On : 30 Mar 2014, 11:47 am

ರೋಣ: ಹಾವೇರಿ ಲೋಕಸಭೆ ಮತಕ್ಷೇತ್ರ ವ್ಯಾಪ್ತಿಗೆ ಬರುವ ರೋಣ ವಿಧಾನಸಭೆ ಮತಕ್ಷೇತ್ರದ 258 ಮತಗಟ್ಟೆಗಳ ಅಧ್ಯಕ್ಷ, ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿ ಕಾರ್ಯಾಗಾರವು ಪಟ್ಟಣದ ಸ್ವತಂತ್ರ ಪ.ಪೂ ಕಾಲೇಜ್‌ನ ವಿವಿಧ ಹಾಲ್‌ಗಳಲ್ಲಿ ಭಾನುವಾರ ನಡೆಯಿತು.
ಕಾರ್ಯಾಗಾರದಲ್ಲಿ 309 ಮತಗಟ್ಟೆ ಅಧ್ಯಕ್ಷ, ಅಧಿಕಾರಿಗಳು ಮತ್ತು 330 ಸಹಾಯಕ ಮತಗಟ್ಟೆ ಅಧಿಕಾರಿಗಳು ಭಾಗವಹಿಸಿ, ಇವಿಎಂ ಮತಯಂತ್ರದ ವಿವಿಧ ಭಾಗಗಳ ಕುರಿತು ತಿಳಿವಳಿಕೆ ಮತ್ತು ಮತದಾನ ವೇಳೆ ಮತದಾರರೊಂದಿಗೆ ಯಾವ ರೀತಿ ವರ್ತಿಸಬೇಕು ಹಾಗೂ ತಮ್ಮ ಚುನಾವಣೆ ಕರ್ತವ್ಯಗಳೇನು? ಅವುಗಳನ್ನು ಯಾವ ರೀತಿ ನಿಭಾಯಿಸಬೇಕು? ಮತದಾನ ಪ್ರಕ್ರಿಯೆಯಲ್ಲಿ ಮತಗಟ್ಟೆ ಅಧಿಕಾರಿಗಳ ಪಾತ್ರವೇನು? ಮತಯಂತ್ರದಲ್ಲಿ ನೂತನವಾಗಿ ಅಳವಡಿಸಲಾದ ಃಕಖಿಆ (ಮೇಲಿನ ಅಬ್ಯರ್ಥಿಗಳು ಯಾರು ಬೇಡ) ಅಂಶದ ಕುರಿತು ಅನುಭವಿಕ ತರಬೇತಿದಾರಿಂದ ಮತಗಟ್ಟೆ ಅಧಿಕಾರಿಗಳು ಅನೇಕ ಮಾಹಿತಿ ನೀಡಿದರು.  
ಕಾರ್ಯಾಗಾರದಲ್ಲಿ ತರಬೇತಿದಾರರಾಗಿ ಎಸ್.ಟಿ. ಬೈರಪ್ಪನವರ, ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಎಂ.ಎಂ. ತಾಂಬೋಟಿ, ತಾಲೂಕು ಕೃಷಿ ಸಹಾಯ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ್, ಜಿಪಂ ಎಇಇ ಕೆ.ಎಲ್. ಕಟ್ಟಮನಿ, ತಾಪಂ ಇಒ ಎಸ್.ಎಂ. ಪಿಡಶೆಟ್ಟಿ, ಉಪನ್ಯಾಸಕ ಬಿ.ಎಸ್. ಮಾನೆದ, ಜಿ.ಬಿ. ಕಲ್ಲನಗೌಡ್ರ, ಬಿ.ಇಒ ಡಿ.ಐ. ಅಸುಂಡಿ ಸೇರಿದಂತೆ ಮುಂತಾದವರು ತರಬೇತಿ ನೀಡಿದರು.
ಈ ವೇಳೆ ರೋಣ ವಿಧಾನಸಭೆ ಮತಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿ ಷಡಾಕ್ಷರಪ್ಪ, ತಹಸೀಲ್ದಾರ್ ಎ. ಪಂಡಿತ, ಉಪತಹಸೀಲ್ದಾರ್ ಎನ್.ಎಸ್. ಕೂಡಲ, ಚುನಾವಣೆ ಸಿಬ್ಬಂದಿ ಆರ್.ಎನ್. ಜೋಶಿ, ಕಂದಾಯ ನಿರೀಕ್ಷಕ ಕೊಪ್ಪದ ಸೇರಿದಂತೆ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement