ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸದೃಢ ಪ್ರಜಾಪ್ರಭುತ್ವಕ್ಕಾಗಿ ಮತದಾನದಲ್ಲಿ ಭಾಗವಹಿಸಿ

Mainashree
Updated On : 30 Mar 2014, 11:47 am

ಕನ್ನಡಪ್ರಭ ವಾರ್ತೆ, ಗದಗ, ಮಾ. 30
ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಮತದಾರರ ಸಂವಿಧಾನಬದ್ಧ ಹಕ್ಕಾಗಿದೆ. ಇಂತಹ ಪವಿತ್ರ ಹಕ್ಕನ್ನು ಪ್ರತಿಯೊಬ್ಬ ಮತದಾರನೂ ನಿರ್ಭಿಡೆಯಿಂದ ಚಲಾಯಿಸುವುದರಿಂದ ಸದೃಢ ಪ್ರಜಾಪ್ರಭುತ್ವವುಳ್ಳ ದೇಶ ನಿರ್ಮಾಣವಾಗಲು ಸಾಧ್ಯ. ಎಲ್ಲರೂ ಮತದಾನದಲ್ಲಿ ಭಾಗವಹಿಸುವುದು ಅವಶ್ಯ ಎಂದು ಪಿಡಿಒ ಚಂದುಸ್ವಾಮಿ ದೊಡ್ಡಮನಿ ಹೇಳಿದರು.
ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಶನಿವಾರ ಮತದಾನ ಜಾಗೃತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು ಮತ್ತು ಕರ್ತವ್ಯ. ಅದನ್ನು ನಿರ್ಭಯ, ನಿಷ್ಪಕ್ಷಪಾತವಾಗಿ ಚಲಾಯಿಸಬೇಕು ಎಂದರು.
ಪ್ರಮುಖವಾಗಿ ಯುವ ಮತದಾರರು ಹಾಗೂ ಮಹಿಳಾ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮತದಾನದ ಹಕ್ಕು ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಗ್ರಾಮದಲ್ಲಿ ಧ್ವನಿವರ್ಧಕದ ಮೂಲಕ ಮಾಹಿತಿ ಬಿತ್ತರಿಸಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಪ್ರತಿಯೊಬ್ಬ ಮತದಾರನಿಗೆ ಮತದಾನದ ಮಹತ್ವ ತಿಳಿ ಹೇಳಬೇಕು ಎಂದು ದೊಡ್ಡಮನಿ ಹೇಳಿದರು. ಗ್ರಂಥಪಾಲಕ ಸುರೇಶ ಪತ್ತಾರ ಮಾತನಾಡಿ, ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ಜಾಗೃತಿ ಜಾಥಾ, ಕಲಾಮೇಳಗಳಿಂದ ಮಾಹಿತಿ, ಶಾಲಾ ಮಕ್ಕಳಿಂದ ಮಾನವ ಸರಪಳಿ ನಿರ್ಮಾಣ ಇತರ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಶಿವಣ್ಣ ಗಂಗಪ್ಪನವರ, ರಾಮಣ್ಣ ತಳವಾರ, ಕಮ್ಮಾರ, ಬೂದಪ್ಪ ಜಂತ್ಲಿ, ವಿಆರ್‌ಡಬ್ಲೂ ಮುತ್ತಣ್ಣ ಹವಾಜಿ, ಮಸೂರ ಘಟ್ಟದ, ಬಸವರಾಜ ಚಿಗರಿ, ಅಂಗನವಾಡಿ ಎಲ್ಲ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement