ಸುದ್ದಿ ಸಂಕ್ಷೇಪ
ಇಂದು ಸಾಮೂಹಿಕ ವಿವಾಹ
ನರೇಗಲ್ಲ: ಪಟ್ಟಣದ ಕೊಟಗಿಯವರ ತೋಟದಲ್ಲಿ ಶಂಕ್ರಪ್ಪ ಕೊಟಗಿ ಹಾಗೂ ಮಹಾಂತಮ್ಮ ಕೊಟಗಿ ಸ್ಮರಣಾರ್ಥ ನಿರ್ಮಿಸಲಾದ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ದೇವತಾ ಪ್ರತಿಷ್ಠಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಮಾ. 31ರಂದು ಮಧ್ಯಾಹ್ನ 12.30ಕ್ಕೆ ಹಮ್ಮಿಕೊಳ್ಳಲಾಗಿದೆ. ನರೇಗಲ್ಲನ ಮಲ್ಲಿಕಾರ್ಜುನ ಶಿವಾಚಾರ್ಯರು, ನಿಡಗುಂದಿಕೊಪ್ಪದ ಶಿವಬಸವ ಶ್ರೀಗಳು, ಸಯ್ಯದ್ಅಬ್ದುಲ್ ರೈಮಾನಶಾವಲಿ ಖಾದ್ರಿಯ ದರಗಾದ, ಈಶ್ವರಯ್ಯ ವಸ್ತ್ರದ ಶ್ರೀಗಳು, ರುದ್ರಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಸುನಂದಾ ಕೊಟಗಿ, ಸುನಂದಾ ಪಟ್ಟಣಶೆಟ್ಟಿ, ಸುವರ್ಣಾ ಪಟ್ಟಣಶೆಟ್ಟಿ, ಅನ್ನಪೂರ್ಣಾ ಕೊಟಗಿ, ಚನ್ನವ್ವ ಸೊಬರದ, ಮುದಾನಾ ಕುನ್ನಿಬಾವಿ, ಪರಮೇಶ್ವರ ಚಿಕ್ಕೊಪ್ಪದ, ಉಮಾದೇವಿ ಹನುಮನಾಳ, ಶಾಂತವ್ವ ಕೊಟಗಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಬ್ಯಾಂಕ್, ಗ್ರಾಹಕರ ಮಧ್ಯೆ ಉತ್ತಮ ಸಂಬಂಧವಿರಲಿ
ಮುಂಡರಗಿ: ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಒಳ್ಳೆಯ ಸಂಬಂಧವಿದ್ದರೆ ಬ್ಯಾಂಕ್ ಉತ್ತರೋತ್ತರವಾಗಿ ಬೆಳೆಯುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮುಂಡರಗಿ ಶಾಖೆ ಅಂತಹ ಒಳ್ಳೆಯ ಸಂಬಂಧ ಹೊಂದಿದ್ದರಿಂದ ಎರಡೇ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಹುಬ್ಬಳ್ಳಿ ಉಪಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ ಕಾಶಿ ಹೇಳಿದರು. ಅವರು ಈಚೆಗೆ ಬ್ಯಾಂಕ್ನ ಮುಂಡರಗಿ ಶಾಖೆಯಲ್ಲಿ ಹಮ್ಮಿಕೊಂಡ ಗ್ರಾಹಕರ ದಿನಾಚರಣೆ ಮತ್ತು ನೂತನ ಎಟಿಎಂ ಉದ್ಘಾಟಿಸಿ ಮಾತನಾಡಿದರು. ಈ ಎರಡು ವರ್ಷದಲ್ಲಿ ಶಾಖೆ ರು. 10 ಕೋಟಿ ಠೇವಣಿ ಸಂಗ್ರಹಿಸಿದ್ದು ಸಾಮಾನ್ಯ ಕೆಲಸವೇನಲ್ಲ. ಈ ಶಾಖೆಯ ಬ್ಯಾಂಕ್ ಪ್ರಬಂಧಕರು ಮತ್ತು ಸಿಬ್ಬಂದಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಬ್ಯಾಂಕಿನಿಂದ ಸಾಲ ಪಡೆದುಕೊಂಡವರು ಸರಿಯಾಗಿ ಮರುಪಾವತಿ ಮಾಡಿದರೆ ಬ್ಯಾಂಕ್ಗಳು ಮತ್ತಷ್ಟು ಬೆಳೆಯಲು ಸಹಕಾರಿಯಾಗುತ್ತದೆ ಎಂದರು. ಗ್ರಾಹಕರಾದ ಪ್ರೊ.ಎಂ.ಜಿ.ಗಚ್ಚಣ್ಣವರ, ಗುರುಮೂರ್ತಿಸ್ವಾಮಿ ಅಳವಂಡಿ, ಬಸವರಾಜ ನವಲಗುಂದ, ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಶ್ರೀಧರ ಕಲ್ಕೂರ ಮಾತನಾಡಿದರು. ಸಾನಿಧ್ಯವನ್ನು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ವಹಿಸಿದ್ದರು. ಅತಿಥಿಗಳಾಗಿ ಭಾಗವಹಿಸಿದ್ದ ಪಿ. ರಾಜಗೋಪಾಲ, ನಾಗರಾಜ ರೊಟ್ಟಿ, ಎಂ.ಎಸ್. ಕಟ್ಟಿ, ಕೆ.ಎಂ. ಚಂದ್ರಶೇಖರ, ಬಸವರಾಜ ಬಂಡಿಗೇರಿ, ಎಚ್.ಎನ್. ಅಶೋಕ, ಕೆ.ವಿ. ಹಂಚಿನಾಳ, ಎನ್.ಎಚ್. ಇಲ್ಲೂರ, ಆರ್.ಕೆ. ಬಸವರಾಜ ಉಪಸ್ಥಿತರಿದ್ದರು. ಶಾಖಾ ಪ್ರಬಂಧಕ ಆರ್.ಕೆ. ಬಸವರಾಜ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಆರ್.ಎಲ್. ಪೊಲೀಸ್ಪಾಟೀಲ ನಿರೂಪಿಸಿದರು.
ಪರರಿಗಾಗಿ ಬಾಳಿದವನು ಅಮರ: ಚನ್ನವೀರ ಶ್ರೀ
ಗದಗ: ಪರರಿಗಾಗಿ ಬಾಳಿದವನು ಅಮರರಾಗುವ ಮೂಲಕ ಸಮಾಜದಲ್ಲಿ ಶಾಶ್ವತ ಹೆಸರನ್ನು ಪಡೆಯುತ್ತಾರೆ ಎಂದು ಹೂವಿನಶಿಗ್ಲಿಯ ವಿರಕ್ತ ಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು. ಅವರು ಈಚೆಗೆ ಕೆಎಲ್ಇ ಸಂಸ್ಥೆಯ ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಕಳೆದ 30 ವರ್ಷಗಳಿಂದ ಪ್ರಾಧ್ಯಾಪಕರಾಗಿ ಹಾಗೂ ಭೌತಶಾಸ್ತ್ರ ವಿಷಯದ ಸ್ನಾತ್ತಕೋತ್ತರ ವಿಷಯದ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಐ.ಐ. ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಸಮಾರಂಭದಲ್ಲಿ ಗುರಪ್ಪ ಶಿದ್ರಾಮಪ್ಪ ಪಿಳ್ಳಿ ಟ್ರಸ್ಟ್ನ ಕಾರ್ಯಾಧ್ಯಕ್ಷ ಅಮರೇಶ ಪಿಳ್ಳಿ ಪ್ರಾಸ್ತಾವಿಕ ಮಾತನಾಡಿ, ಟ್ರಸ್ಟ್ನ ಧ್ಯೇಯೊದ್ದೇಶ ತಿಳಿಸಿದರು. ನಿವೃತ್ತ ಪ್ರಾಧ್ಯಾಪಕ ಆರ್.ಬಿ. ಬನ್ನೂರ ಉಪಸ್ಥಿತರಿದ್ದರು. ಸಮಾರಂಭದ ಕೊನೆಗೆ ಡಾ.ನಾಗರಳ್ಳಿ ಇವರಿಂದ ವಚನ ಸಂಗೀತ ಸೇವೆ ಜರುಗಿತು. ಸುಧಾ ಪಿಳ್ಳಿ, ಡಿ.ಎಚ್. ಪಾಟೀಲ, ಜೆ.ಎಸ್. ರಾಮಶೆಟ್ಟಿ, ಎಸ್.ಎಸ್. ವಡಕಣ್ಣವರ ಮುಂತಾದವರು ಇದ್ದರು.
ಜೆಡಿಎಸ್ಗೆ ಮತ್ತಣ್ಣ ನೇಮಕ
ನರಗುಂದ: ನರಗುಂದ ತಾಲೂಕು ಜೆಡಿಎಸ್ ಘಟಕದ ಉಪಾಧ್ಯಕ್ಷರಾಗಿ ಮುತ್ತಣ್ಣ ಸೋಮನಕಟ್ಟಿ ಅವರನ್ನು ನೇಮಿಸಲಾಗಿದೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ತಾಲೂಕಿನಲ್ಲಿ ಜೆಡಿಎಸ್ನ್ನು ಬೇರು ಮಟ್ಟದಿಂದ ಸಂಘಸಬೇಕೆಂದು ತಾಲೂಕು ಅಧ್ಯಕ್ಷ ಡಾ. ನಾಗರಾಜ ಕಜಗಾರ ಸೂಚಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಪ್ರಚಾರ
ಮುಂಡರಗಿ: ಮುಂಡರಗಿ ಪಟ್ಟಣದ 18ನೇ ವಾರ್ಡಿನಲ್ಲಿ ಸದಸ್ಯ ಪ್ರೇಮವ್ವ ಪಾಲಾಕ್ಷಿ ಗಣದಿನ್ನಿಯವರ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ವಿದ್ಯಾನಗರದಲ್ಲಿ ಹಾವೇರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಪ್ರಚಾರ ಮಾಡಲಾಯಿತು.
18ನೇ ವಾರ್ಡಿನ ವಿದ್ಯಾನಗರ, ಕಾಲವಾಡ ಪ್ಲಾಟ್ನಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿಯ ಪರ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಸವರಾಜ ರಾಮೇನಹಳ್ಳಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು 13 ಜನ ಪುರಸಭೆಯ ಕಾಂಗ್ರೆಸ್ ಸದಸ್ಯರಿದ್ದು, ಪ್ರತಿದಿನ ಒಂದು ವಾರ್ಡಿಗೆ ಅಧ್ಯಕ್ಷ, ಉಪಾಧ್ಯಕ್ಷರಾದಿಯಾಗಿ ಎಲ್ಲ ಸದಸ್ಯರೂ ತೆರಳಿ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರ ಮಾಡುವುದಾಗಿ ಅವರು ತಿಳಿಸಿದರು.
ಅಬ್ದುಲ್ ಖುರೇಶಿ, ಉಪಾಧ್ಯಕ್ಷ ಸೋಮನಗೌಡ ಗೌಡ್ರ, ಚಂದ್ರಶೇಖರ ಬಡಿಗೇರ, ಬಸವರಾಜ ರಾಮೇನಹಳ್ಳಿ, ಮುದಿಯಪ್ಪ ಕುಂಬಾರ, ರಾಮು ಭಜಂತ್ರಿ, ರಾಘವೇಂದ್ರ ಕುರಿಯವರ, ವೀರೇಶ ಸಜ್ಜನರ, ಲಿಂಗರಾಜಗೌಡ ಪಾಟೀಲ, ಬಸವರಾಜ ನರೇಗಲ್, ನಾಗೇಶ ಹುಬ್ಬಳ್ಳಿ, ಡಿ.ಎಂ. ಕಾತರಕಿ, ಪಾಲಾಕ್ಷಿ ಗಣದಿನ್ನಿ, ಬಸವರಾಜ ಗಣಾಚಾರಿ, ಶಶಿಧರ ಹೊಸಪೇಟಿ, ಮೌನೇಶ ಬಡಿಗೇರ, ರೆಹಮಾನ್ಸಾಬ್ ಮಲ್ಲಿನಕೇರಿ, ಈರಣ್ಣ ಉಳ್ಳಾಗಡ್ಡಿ, ಅಶೋಕ ಅಂಗಡಿ, ದೇವರಾಜ ಹಡಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.