ಇಂದು ಸಿದ್ಧೇಶ್ವರ ರಥೋತ್ಸವ
ರಾಣಿಬೆನ್ನೂರು: ಇಲ್ಲಿನ ಮಾರುತಿ ನಗರದಲ್ಲಿರುವ ಮರುಳಸಿದ್ದೇಶ್ವರ ದೇವಸ್ಥಾನದ ಮಹಾರಥೋತ್ಸವ ಹಾಗೂ ಗುಗ್ಗಳ ಕಾರ್ಯಕ್ರಮ ಮೇ 2ರಿಂದ 5ರ ವರೆಗೆ ನಡೆಯಲಿವೆ. ಮೇ 2ರಂದು ಸಂಜೆ 5ಕ್ಕೆ ಕಂಕಣಧಾರಣ, 4ರಂದು ಬೆಳಗಿನ ಜಾವ 6 ಗಂಟೆಯಿಂದ ಗುಗ್ಗಳ ಕಾರ್ಯಕ್ರಮ ಹಾಗೂ ಸಂಜೆ 4 ಗಂಟೆಗೆ ಮಹಾರಥೋತ್ಸವ ಜರುಗುವುದು. ಮೇ 5ರಂದು ಸಾಯಂಕಾಲ ಬೆಲ್ಲದ ಬಂಡಿ, ಓಕುಳಿ ಕಾರ್ಯಕ್ರಮಗಳು ನೆರವೇರುವವು ಎಂದು ಮರುಳಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ತಿಳಿಸಿದೆ.
5ಕ್ಕೆ ಗ್ರಾಪಂ ನೌಕರರ ಪ್ರತಿಭಟನೆ
ಹಾವೇರಿ: ಗ್ರಾಮ ಪಂಚಾಯತಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಮೇ 5ರಿಂದ ಬೆಳಗ್ಗೆ 11.30ಕ್ಕೆ ಜಿಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.
ಗ್ರಾಪಂ ನೌಕರರ ವಿವಿಧ ಬೇಡಿಕೆಗಳಾದ ಕಾರ್ಮಿಕ ಇಲಾಖೆ ಹೊರಡಿಸಿದ ಕನಿಷ್ಟ ವೇತನ 2011ರ ಪ್ರಕಾರ ಬಿಲ್ಲ್ ಕಲೆಕ್ಟರ್ಗೆ ರು. 7122, ಪಂಪ್ ಆಪ್ರೇಟರ್ಗಳಿಗೆ ರು. 7011, ಸಿಪಾಯಿಗಳಿಗೆ ರು. 6790 ವೇತನ ನೀಡುವ ಮೂಲಕ ಇತರೆ ಸಿಬ್ಬಂದಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಎಲ್ಲಾ ಸಿಬ್ಬಂದಿಗೆ ಅನಮೋದನೆ ನೀಡಬೇಕು. ಬಾಕಿ ವೇತನ ನೀಡಬೇಕು, ಕಂಪ್ಯೂಟರ್ ಆಪರೇಟರ್ಗಳನ್ನು ಗ್ರಾಪಂ ನೌಕರರೆಂದು ಪರಿಗಣಿಸಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ರಾಜ್ಯ ಗ್ರಾಪಂ ನೌಕರ ಸಂಘದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು.
ಗಾಯಕರಿಗೆ ಸಂದರ್ಶನ
ಹಾವೇರಿ: ಇಲ್ಲಿಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಹಾಗೂ ಆಕಾಶವಾಣಿ ಅನುಮೋದಿತ ಕವಿ ಗಂಗಾಧರ ನಂದಿ ಬರೆದ ಗೀತೆಗಳ 2ನೇ ಧ್ವನಿ ಸುರುಳಿ ತರಲು ಯೋಚಿಸಲಾಗಿದೆ. ಪರಿಣಿತರಿಂದ 2 ದಿನ ಕಾಲ ಹಾಡುಗಾರರಿಗೆ ತರಬೇತಿ ನೀಡಲಾಗುವುದು. ಆಸಕ್ತರು ಮೇ 4ರಂದು ಮಧ್ಯಾಹ್ನ 2 ಗಂಟೆಗೆ ಹೊಂಡದಮಠ, ಅಕ್ಕನ ಬಳಕ ಜಯದೇವ ನಗರ ಇಲ್ಲಿಗೆ ಸಂದರ್ಶನ, ಧ್ವನಿ ಪರೀಕ್ಷೆಗೆ ಬರಬೇಕು. ಹೆಚ್ಚಿಗೆ ಮಾಹಿತಿಗಾಗಿ 9886428900 ಸಂಪರ್ಕಿಸಿ.