ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ ಪದಗ್ರಹಣ ನಾಳೆ

Lingaraj Badiger
Updated On : 2 May 2014, 12:07 pm

ಗದಗ: ಗದಗ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮೇ 3ರಂದು ಹಾಗೂ ಮೇ 11ರಂದು ಉಚಿತ ಅಯ್ಯಾಚಾರ ಹಾಗೂ ಭಕ್ತರಿಗೆ ದೀಕ್ಷಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾದ ಕಾರ್ಯಕಾರಿ ಮಂಡಳಿ ನಿರ್ದೇಶಕ ವಿ.ಕೆ. ಗುರುಮಠ ಹೇಳಿದರು.
ಅವರು ಗುರುವಾರ ಗದಗ ನಗರದ ಕಾಶೀ ಪೀಠದ ಸಂಸ್ಕೃತ ವೈದಿಕ ಪಾಠ ಶಾಲೆಯ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೇ 3ರಂದು ಬೆಳಗ್ಗೆ 10.30ಕ್ಕೆ ಬೆಟಗೇರಿ ಶರಣಬಸವೇಶ್ವರ ನಗರದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಲಿದೆ. ಕಾಶೀ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಸೌದತ್ತಿ ಮುಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ನೇತೃತ್ವ ವಹಿಸಲಿದ್ದಾರೆ. ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ ಉದ್ಘಾಟಿಸುವರು. ಪಂಚಾಂಗ ಕರ್ತೃ ವೇ.ಮೂ. ಬಸವಯ್ಯ ಶಾಸ್ತ್ರೀಗಳು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಬಸವರಾಜ ಶಾಬಾದಿಮಠ, ಸಿ.ಬಿ. ದೊಡ್ಡಗೌಡ್ರ, ವೀರಣ್ಣ ಧನ್ನೂರಮಠ, ಮಹಾತೇಂಶ ಕಾಡಾಮುಡಿಮಠ, ರಾಜ್ಯ ಯುವ ಘಟಕದ ಅಧ್ಯಕ್ಷ ಬಂಗಾರೇಶ ಹಿರೇಮಠ, ವಿಜಯಕುಮಾರ ಹಿರೇಮಠ, ರಾಜ್ಯ ಮಹಿಳಾ ಘಟಕದ ಶಶಿಕಲಾ ಚಿಕ್ಕಮಠ, ನಿರ್ಮಲಾ ಹಿರೇಮಠ ಆಗಮಿಸುವರು.
ಮೇ 11ರಂದು ಉಚಿತ ಅಯ್ಯಾಚಾರ ಹಾಗೂ ಭಕ್ತರಿಗೆ ದೀಕ್ಷಾ ಕಾರ್ಯಕ್ರಮ ಸಂಭಾಪುರ ರಸ್ತೆಯಲ್ಲಿನ ಕಾಶೀ ಪೀಠದ ಪಂಚಾಚಾರ್ಯ ವೈದಿಕ ಪಾಠಶಾಲೆಯಲ್ಲಿ ಜರುಗಲಿದೆ. ಅಯ್ಯಾಚಾರ ಹಾಗೂ ದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಮೇ 8ರೊಳಗಾಗಿ ವೈದಿಕ ಪಾಠ ಶಾಲೆಯ ಆಡಳಿತಾಧಿಕಾರಿ ಬೆಟದಯ್ಯ ಹಿರೇಮಠ 9243979638 ಸಂಪರ್ಕಿಸಬೇಕು ಎಂದರು. ಬಾಬಣ್ಣ ಶಾಬಾದಿಮಠ, ವಿ.ಸಿ. ಧನ್ನೂರಮಠ, ವೀರೇಶ ಕೂಗು, ವಿಜಯುಕುಮಾರ ಹಿರೇಮಠ, ಮಹೇಶ್ವರಯ್ಯ ಹುಬ್ಬಳ್ಳಿಮಠ, ಶಿವಯ್ಯ ಹಿರೇಮಠ, ಶೈಲಜಾ ಭೂಸನೂರಮಠ, ಲತಾ ಮುತ್ತಿನಪೆಂಡಿಮಠ, ಜಯಶ್ರೀ ಹಿರೇಮಠ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement