ನಾಳೆಯಿಂದ ಟೂರ್ನಂಮೆಂಟ್
ನರೇಗಲ್ಲ: ಮೇ 3ರಿಂದ 6ರ ವರೆಗೆ ಸ್ಥಳೀಯ ಕ್ರೀಡಾಪಟುಗಳು ಸಚಿನ್ ತೆಂಡೂಲಕರ ಪ್ರೀಮಿಯರ ಲೀಗ್ ಸಿಕ್ಸ್ ಎ ಸೈಡ್ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್-2014ನ್ನು ಸ್ಥಳೀಯ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಆಯೋಜಿಸಿದೆ. ಆಸಕ್ತರು ಹೆಸರನ್ನು ಯಲ್ಲಪ್ಪ-9886976468, ಪ್ರಕಾಶ-9686383116 ಹಾಗೂ ಹರ್ಷಾ ಎಲೆಕ್ಟ್ರಾನಿಕ್ಸ್(7353428206) ಇಲ್ಲಿ ತಮ್ಮ ಹೆಸರು ನೋಂದಾಯಿಸಬೇಕೆಂದು ತಿಳಿಸಿದ್ದಾರೆ.
ನಾಳೆ ಸಾಮೂಹಿಕ ವಿವಾಹ
ರೋಣ: ತಾಲೂಕಿನ ಹೊಸಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಬಸವೇಶ್ವರ ರಥೋತ್ಸವ ಮತ್ತು ಕಲಬುರ್ಗಿ ಶರಣಬಸವೇಶ್ವರರ 40ನೇ ವರ್ಷದ ಪುರಾಣ ಮಂಗಲೋತ್ಸವ ಅಂಗವಾಗಿ ಮೇ 3ರಂದು ಬೆಳಗ್ಗೆ 11.30ಕ್ಕೆ ಸಾಮೂಹಿಕ ವಿವಾಹಗಳು ಹೊಸಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಲಿವೆ. ಹಾಗೂ ಬಸವ ಜಯಂತ್ಯುತ್ಸವ ಅಂಗವಾಗಿ ಹೊಸಹಳ್ಳಿ ಗ್ರಾಮದಲ್ಲಿ ಮೇ 4ರಂದು ಸಂಜೆ 5ಕ್ಕೆ ಬಸವೇಶ್ವರ ಬೃಹತ್ ರಥೋತ್ಸವ ಜರುಗಲಿದೆ. ಮೇ 5ರಂದು ಉದಯ ಪಲ್ಲಕ್ಕಿ ಉತ್ಸವ, ನಂದಿಕೋಲಿನ ಕುಣಿತ ಹಾಗೂ ನರೇಗಲ್ ಗ್ರಾಮದ ಪುರವಂತರಿಂದ ವೀರಭದ್ರೇಶ್ವರ ಒಡಪುಗಳು, ಬಳಿಕ ಸಂಜೆ ಕಡಬಿನ ಕಾಳಗ ಕಾರ್ಯಕ್ರಮ ಜರುಗಲಿದೆ. ಮೇ 4ರಂದು ಬಸವೇಶ್ವರ ಯುವಕ ಮಂಡಳ ವತಿಯಿಂದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ 53 ಕೆಜಿ ಒಳಗಿನವರಿಗಾಗಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಜರುಗುವುದು.
ನೀರಿಗಾಗಿ ಹೆಲ್ಪ್‌ಲೈನ್ ಕರೆ
ಗದಗ: ತಾಲೂಕಿನ ಬಳಗಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಸಿಬ್ಬಂದಿ ವರ್ಗದ ಸೂಚನೆಯ ಮೇರೆಗೆ ಬಳಗಾನೂರು ಗ್ರಾಮದ ಕುಡಿಯುವ ನೀರು ಸರಬರಾಜು ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ಗ್ರಾಮದ ಪಿಡಿಒ ಮೊ. 9480865203, ಕಾರ್ಯದರ್ಶಿ ಮೊ. 9481449374 ಹಾಗೂ ವಾಟರಮನ್ ಮೊ. 8722829768, 8762833613 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.