ಚನ್ನಬಸಪ್ಪಗೆ ಬೀಳ್ಕೊಡುಗೆ
ಗಜೇಂದ್ರಗಡ: ಗ್ರಾಹಕರಿಗೆ ಉತ್ತಮ ಸೇವೆ ನೀಡುವದರೊಂದಿಗೆ ಬ್ಯಾಂಕ್ ಶ್ರೇಯೋಭಿವೃದ್ಧಿಗೆ ಕಳಕಳಿಯಿಂದ ಶ್ರಮಿಸಿದ ಮೋಹನ ಜೀರೆ ಸೇವೆ ಶ್ಲಾಘನೀಯ ಎಂದು ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಆರ್.ಸಿ. ಚನ್ನಬಸಪ್ಪ ಹೇಳಿದರು. ಸ್ಥಳೀಯ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಮೋಹನ ಜೀರೆ ಅವರನ್ನು ಬುಧವಾರ ಸಂಜೆ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು. ಗ್ರಾಹಕರ ಅಭ್ಯದಯ ಜತೆಗೆ ಉತ್ತಮ ಗುಣಮಟ್ಟದ ಸೇವೆ ನೀಡುವುದು ಬ್ಯಾಂಕಿನ ಮುಖ್ಯ ಧ್ಯೇಯ. ಅದನ್ನು ಉಸಿರಾಗಿಸಿಕೊಂಡ ಜೀರೆ ಹಳ್ಳಿ ಜನತೆಗೆ ಬ್ಯಾಂಕ್ ಸಂಪರ್ಕ ಕಲ್ಪಿಸುವ ಜತೆಗೆ ಹಳ್ಳಿಯ ಎಲ್ಲ ಜನರಿಗೆ ಉಳಿತಾಯ, ಠೇವಣಿ, ಸಾಲ ಮುಂತಾದ ಸೌಲಭ್ಯಗಳು ತಲುಪುವಂತೆ ಕಾರ್ಯ ನಿರ್ವಹಿಸಿದ್ದಾರೆ ಎಂದರು. ಮೋಹನ ಜೀರೆ ಮಾತನಾಡಿ, ನಿವೃತ್ತಿ ಬಳಿಕ ಬದುಕನ್ನು ಸಮಾಜ ಸೇವೆಗೆ ಮುಡಿಪಾಗಿಡುತ್ತೇನೆ. ಕೆನರಾ ಬ್ಯಾಂಕ್ ಗ್ರಾಹಕರಿಗೆ ತ್ವರಿತ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದರು. ಹನುಮಂತರಾವ್ ಚವ್ಹಾಣ, ಗಣಪತಸಾ ರಂಗ್ರೇಜಿ, ಕೃಷ್ಣಾಜಿ ಇಟಗಿ, ವಸಂತರಾವ್ ಮೋಹಿತೆ, ಎಸ್.ಎನ್. ತಿಮ್ಮನಗೌಡ್ರ, ಡಿ.ಕೆ. ಛಾವಣಿ, ಎಸ್.ಎಂ. ಕೊರಧಾನಮಠ, ವಿನಾಯಕ್ ರಾಜಪುರೋಹಿತ, ಎಚ್.ಪಿ. ಜರತಾಗರ, ಬಿ.ಎಚ್. ಸವಣೂರ, ಎಚ್.ವಿ. ಈಳಗೇರ, ಪ್ರವೀಣ, ಉಮೇಶ, ಪಿ.ಕೆ. ದೀಪಾ, ವಾಲಿಶ್ ದೇಶಮುಖ, ರಾಜೇಶ ಕುಮಾರ, ಕೆ.ಬಿ. ಸವಣೂರ, ಬಸವರಾಜ ಶಿಂದಗಿ ಉಪಸ್ಥಿತರಿದ್ದರು.