ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿವಾಜಿ ಆದರ್ಶ ಪಾಲಿಸಿ: ಮಿಥುನ್ ಪಾಟೀಲ್

Lingaraj Badiger
Updated On : 3 May 2014, 11:58 am

ಗಜೇಂದ್ರಗಡ: ಮಹಾನ್ ಸ್ವಾಭಿಮಾನಿ, ದೇಶಪ್ರೇಮಿ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳು ಸಾರ್ವಕಾಲಿಕ ಎಂದು ಮಿಥುನ್ ಪಾಟೀಲ್ ಹೇಳಿದರು. ಪಟ್ಟಣದ ಶಿವಾಜಿ ವೃತ್ತದ ಬಳಿ ಗುರುವಾರ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್‌ದಿಂದ ಛತ್ರಪತಿ ಶಿವಾಜಿ ಮಹಾರಾಜರ 387ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ತಾಯಿಯ ಪ್ರೇರಣೆಯಿಂದ ಧರ್ಮನಿಷ್ಠೆಯಿಂದ ಆಡಳಿತ ನಡೆಸಿ ಮರಾಠ ದೊರೆಯಾಗಿ ಮಿಂಚಿದರು. ಅಂಥ ಮಹಾನ್ ನಾಯಕರ ಆದರ್ಶಗಳನ್ನು ಎಲ್ಲರೂ ಅನುಕರಿಸಬೇಕು. ವೀರವಂಶಸ್ಥರಾದ ಕ್ಷತ್ರಿಯ ಮರಾಠರು ಸಂಘಟಿತರಾಗಿ ಕೂಡಿ ಬಾಳುವ ಭಾರತೀಯ ಸಂಸ್ಕೃತಿ, ಪರಂಪರೆ ಉಳಿವಿಗೆ ಪಣತೊಡಬೇಕು ಎಂದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಎಸ್.ಟಿ. ಭೈರಪ್ಪನವರ ಮಾತನಾಡಿ, ದೇಶದ ಎಲ್ಲ ಧರ್ಮಗಳನ್ನು ಗೌರವಾದರಗಳಿಂದ ಕಾಣುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ವ್ಯಕ್ತಿತ್ವ, ರಾಷ್ಟ್ರಾಭಿಮಾನವನ್ನು ಮಕ್ಕಳ ಬದುಕಿನಲ್ಲಿ ಅಳವಡಿಸಲು ಪ್ರೇರೇಪಿಸಬೇಕು ಎಂದರು.
ಬೆಳಗ್ಗೆ ಭಗವಾ ಧ್ವಜಾರೋಹಣ, ಶಿವಾಜಿ ಮಹಾರಾಜರ ತೊಟ್ಟಿಲೋತ್ಸವ ಜರುಗಿತು. ಸಂಜೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಬಲರಾಮಗಿರಿ ಗೊಸಾಯಿಮಠ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ವಿರೋಧ ಪಕ್ಷ ನಾಯಕ ಶಿವರಾಜ ಘೋರ್ಪಡೆ, ಅಕ್ಕಮ್ಮ ಜಾನಾಯಿ, ಪುರಸಭೆ ಸದಸ್ಯ ಎಂ.ಎಸ್. ಹಡಪದ, ಡಿ.ಕೆ. ಛಾವಣಿ, ಕೃಷ್ಣಾಜಿ ದುಮ್ಮಾಳ, ಸಮಾಜ ಅಧ್ಯಕ್ಷ ಶೇಖಪ್ಪ ರಾಮಜಿ, ಪರಶುರಾಮ ಕಲ್ಗುಡಿ, ಶಿವಾಜಿ ಹಾಳಕೇರಿ, ಕೃಷ್ಣಾಜಿ ಸೂರ್ಯವಂಶಿ, ಬಾಳಪ್ಪ ಪವಾರ ಪರಸಪ್ಪ ನಿಂಬೋಜಿ, ಯಲ್ಲಪ್ಪ ಕಲ್ಗುಡಿ, ಜಗದೀಶ ಕಲ್ಗುಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement