ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿವಾಜಿ ಜಯಂತಿ ಅದ್ಧೂರಿ ಆಚರಣೆ

Lingaraj Badiger
Updated On : 3 May 2014, 12:03 pm

ಕನ್ನಡಪ್ರಭ ವಾರ್ತೆ, ರೋಣ, ಮೇ 2
ರೋಣ ತಾಲೂಕು ಕ್ಷತ್ರಿಯ ಸಮಾಜ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಸಂಘದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜ ಅವರ 387ನೇ ಜಯಂತಿಯನ್ನು ಗುರುವಾರ ಪಟ್ಟಣದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಛತ್ರಪತಿ ಶಿವಾಜಿ ಮಹಾರಾಜ ಭಾವಚಿತ್ರಕ್ಕೆ ಪಟ್ಟಣದ ಸಿದ್ಧಾರೂಢಮಠದ ಮುಂದೆ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಲಾಯಿತು. ಟ್ರ್ಯಾಕ್ಟರ್ ಮೂಲಕ ಪಟ್ಟಣದ ಸೂಡಿ ವೃತ್ತ, ಮುಲ್ಲಾನಬಾವಿ ವೃತ್ತಿ, ಪೋತದಾರ ರಾಜನ ಕಟ್ಟೆಯ ಮುಲಕ ತಹಸೀಲ್ದಾರ್ ಕಚೇರಿವರೆಗೆ ಜರುಗಿತು. ಮೆರವಣಿಗೆಯುದ್ದಕ್ಕೂ ಕುಂಭ ಹೊತ್ತ ಮಹಿಳೆಯರು, ವಾದ್ಯ, ಜಾಂಜ್‌ಮೇಳ ಆಕರ್ಷಣಿಯವಾಗಿತ್ತು. ಜಯಂತ್ಯುತ್ಸವದಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳದಿದ್ದದ್ದು ಮತ್ತು ತಾಲೂಕು ಆಡಳಿತದಿಂದ ಜರುಗದಿದ್ದ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.
ಆಗ್ರಹ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸರ್ಕಾರ ಮತ್ತು ತಾಲೂಕು ಆಡಳಿತ ವತಿಯಿಂದ ಆಚರಣೆ ಮಾಡದೇ ಇದ್ದದ್ದು ತೀವ್ರ ಬೇಸರ ತಂದಿದೆ. ಈ ಕುರಿತು ತಹಸೀಲ್ದಾರ್ ಎ.ಜಿ. ಪಂಡಿತ ಅವರನ್ನು ಸಂಪರ್ಕಿಸಿದರೂ ಪ್ರಯೋಜನವಾಗದ್ದರಿಂದ ಸಮಾಜದಿಯಿಂದ ಆಚರಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ತಾಲೂಕು ಆಡಳಿತ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆಚರಿಸುವಲ್ಲಿ ಮುಂದಾಗಬೇಕು ಎಂದು ಛತ್ರಪತಿ ಶಿವಾಜಿ ಮಹಾರಾಜ ಕ್ಷತ್ರಿಯ ಸಮಾಜ ತಾಲೂಕು ಅಧ್ಯಕ್ಷ ಅಪ್ಪಾಜಿರಾವ್ ಮಾನೆ ಆಗ್ರಹಿಸಿದರು.
ಲಕ್ಷ್ಮಣ ಜಾಧವ, ಅರ್ಜುನ ಜಾಧವ, ರಂಗನಾತ ಜಾಧವ, ಶಿವಾಜಿ ಜಾಧವ, ಲಕ್ಷ್ಮ್ಣಣ ವಾಸ್ಟರ, ಪುಂಡಲಿಕ ಸಾವಂತ, ಮನೋಹರ ಜಾಧವ, ಮಂಜುನಾಥ ಜಾಧವ, ನಾರಾಯಣ ಕದಂ, ವಿಜಯ ಸಾವಂತ, ರಾಜು ಸಾವಂತ, ಈರಣ್ಣ ಯಾದವ, ಬಸವರಾಜ ಜಾಧವ, ಶಾಂತಾ ಜಾಧವ, ಶ್ರೀಪಾದ ಸಾವಂತ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement