ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

7ರಂದು ಉರ್ದು ಕಾವ್ಯ ಕಮ್ಮಟ

Rashmi Kasaragodu
Updated On : 4 May 2014, 12:54 pm

ಗದಗ: ಜಿಲ್ಲಾ ಶಿಕ್ಷಕರ ಸಾಹಿತ್ಯ ವೇದಿಕೆಯ ಅಡಿಯಲ್ಲಿ ಜಿಲ್ಲೆಯ ಎಲ್ಲ ಉರ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗಾಗಿ ಕಾವ್ಯ ರಚನಾ ಕಮ್ಮಟ ಕಾರ್ಯಾಗಾರ ಮೇ 7ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ನಗರದ ಹಳೇ ಬಸ್ ನಿಲ್ದಾಣದ ಬಳಿ ಇರುವ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ನಡೆಯಲಿದೆ. ಈ ಕಾವ್ಯ ಕಮ್ಮಟದಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ ಉರ್ದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಉರ್ದು ಸಾಹಿತ್ಯದಲ್ಲಿ ಆಸಕ್ತಿ ಇರುವ ಶಿಕ್ಷಕರು ಭಾಗವಹಿಸುವರು. ನುರಿತ ಅನುಭವಿಕ ವಿಷಯತಜ್ಞರು ಕಾವ್ಯ ರಚನಾ ಸ್ವರೂಪ ವಿಧಾನ ಪ್ರಕಾರಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದು, ನಂತರ ಕಾವ್ಯ ರಚಿಸಿ ತರಬೇತಿ ನೀಡುವರು. ಕಮ್ಮಟದಲ್ಲಿ ರಚಿಸಲಾದ ಕವಿತೆಗಳನ್ನು ಪರಿಶೀಲಿಸಿ ಆಯ್ದ ಕವನಗಳ ಕವನ ಸಂಕಲನವನ್ನು ವೇದಿಕೆಯಡಿಯಲ್ಲಿ ಪ್ರಕಟಿಸಲಾಗುವುದು. ಶಿಕ್ಷಕರು ಭಾಗವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ವಿ. ರಾಜೇಂದ್ರಪ್ರಸಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ವಿಶ್ವಗುರು ಬಸವಣ್ಣನ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಿ


ಮುಂಡರಗಿ: ಬಸವ ತತ್ವ ನೆನೆಯುವುದರ ಜತೆಗೆ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಜೀವನವನ್ನಾಗಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಡಿ.ಆರ್.ಹೆಗ್ಗೊಂಡ ಹೇಳಿದರು. ಅವರು ಶುಕ್ರವಾರ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬರೂ ಬಸವಣ್ಣನವರ ತತ್ವದ ಹಾದಿಯಲ್ಲಿ ನಡೆಯೋಣ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ, ಬಸವರಾಜ ನವಲಗುಂದ ಮಾತನಾಡಿದರು. ತಾಪಂ ಇಒ ಡಿ.ಮೋಹನ, ಎ.ಎನ್. ಪಾಟೀಲ, ಲೋಕೋಪಯೋಗಿ ಇಲಾಖೆ ಸಜ್ಜನ, ರಾಮಚಂದ್ರ ಗಾರವಾಡ, ದೇವಪ್ಪ ಇಟಗಿ ಸೇರಿದಂತೆ ತಾಲೂಕಿನ ಎಲ್ಲ ಸರ್ಕಾರಿ ಇಲಾಖಾಧಿಕಾರಿಗಳು ಪಾಲ್ಗೊಂಡಿದರು. ಎಸ್.ಎಸ್. ಬಿಚ್ಚಾಲಿ ನಿರೂಪಿಸಿದರು. ಶೇಖರ ಡಂಬಳ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement