ಅಂಬೇಡ್ಕರ್ ಸಮಾನತೆಯ ಹರಿಕಾರ: ಬಂಕದ
ಗಜೇಂದ್ರಗಡ: ಡಾ. ಅಂಬೇಡ್ಕರ್ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಅರ್ಥಪೂರ್ಣ ಎಂದು ಸಿದ್ಧರಾಮೇಶ್ವರ ಕಟ್ಟಡ ಕೂಲಿ, ಕಾರ್ಮಿಕ ಸಂಘದ ಅಧ್ಯಕ್ಷ ಯಲ್ಲಪ್ಪ ಬಂಕದ ಹೇಳಿದರು. ಅವರು ಈಚೆಗೆ ಸ್ಥಳೀಯ ಕಟ್ಟಡ ಕಾರ್ಮಿಕರ ಕಚೇರಿಯಲ್ಲಿ ಭೋವಿ ಸಮಾಜ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ. ಅಂಬೇಡ್ಕರ್ ಮಹಾನ್ ಕಾನೂನು ತಜ್ಞರು ಎಂದರು. ಪುರಸಭೆ ಸದಸ್ಯ ಷಣ್ಮುಖಪ್ಪ ಚಿಲ್ಝರಿ ಮಾತನಾಡಿದರು. ಬುಡ್ಡಪ್ಪ ಮೂಲಿಮನಿ, ದುರುಗಪ್ಪ ಬಳೂಟಗಿ, ಬಸವರಾಜ ಬಂಕದ, ಮೂಕಪ್ಪ ನಿಡಗುಂದಿ, ಷಣ್ಮುಖಪ್ಪ ನಿಡಗುಂದಿ, ಅಶೋಕ ಹೊಸಮನಿ, ಮಹಾಂತೇಶ ಹೊಸಮನಿ, ಶರಣಪ್ಪ ಚಳಗೇರಿ, ದುರ್ಗಪ್ಪ ಮೂಧೋಳ, ಮುದಿಯಪ್ಪ ಮುದೋಳ, ನಾಗಪ್ಪ ಚಿಲ್ಝರಿ ಮೂಕಪ್ಪ ಗುಡೂರ, ಶಿವಪ್ಪ, ಲಕ್ಷ್ಮಣ ಬಂಕದ ಇದ್ದರು.