ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಡವಿಸೋಮಾಪುರ: ಇಂದು ಉಪವಾಸ ಸತ್ಯಾಗ್ರಹ

Rashmi Kasaragodu
Updated On : 4 May 2014, 12:53 pm

ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮದ ಮುಸ್ಲಿಂ ಸಮಾಜದ ಖಬರಸ್ಥಾನ(ಸ್ಮಶಾನ) ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಿಂಗಟಾಲೂರು ಏತ ನೀರಾವರಿಯ ಯೋಜನೆಯ ಕಾಲುವೆಗಳನ್ನು ಬೇರೆಡೆಗೆ ನಿರ್ಮಾಣಕ್ಕೆ ಒತ್ತಾಯಿಸಿ ಮೇ 4ರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಅಡವಿಸೋಮಾಪುರ ಅಂಜುಮಾನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ಕಾಶೀಂಸಾಬ್ ಹರಿವಾಣ ತಿಳಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಖಬರಸ್ಥಾನ(ಸ್ಮಶಾನ)ದ ಜಮೀನು ಕಡಿಮೆ ಇದೆ. ಕಾಲುವೆಗಾಗಿ ಭೂಮಿ ಕಬಳಿಕೆಯಿಂದ ಸ್ಮಶಾನದಲ್ಲಿ ಜಾಗದ ಸಮಸ್ಯೆ ಉದ್ಭವವಾಗಲಿದೆ. ಹೀಗಾಗಿ, ಈ ಭೂಮಿಯಲ್ಲಿ ನೀರಾವರಿ ಕಾಲುವೆ ಬೇಡ ಎಂದರು. ಬೇರೆಡೆ ಜಾಗ ನೀಡಿದರೇ ಅಭ್ಯಂತರವಿಲ್ಲ ಎಂದರು. ಕಮಿಟಿ ಉಪಾಧ್ಯಕ್ಷ ಹುಸೇನಬಾಬ್ ನದಾಫ್, ಶೌಕತಲಿ ಮಿಶ್ರಿಕೋಟೆ, ದಾವಲಸಾಬ್ ಹುಯಿಲಗೋಳ, ಚಾಂದಸಾಬ್ ಬೇಲೆರಿ, ಇತರರು ಇದ್ದರು.

ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ
ಅಗತ್ಯ: ತಳವಾರ
ರೋಣ: ಆರೋಗ್ಯಕರ ಶರೀರ, ಮನಸ್ಸು ಹೊಂದಲು ಕ್ರೀಡೆ ಮುಖ್ಯ ಎಂದು ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಬಸವಂತಪ್ಪ ತಳವಾರ ಹೇಳಿದರು. ಶನಿವಾರ ತಾಲೂಕಿನ ತಳ್ಳಿಹಾಳ ಗ್ರಾಮದಲ್ಲಿ ಡಾ. ಬಾಬುರಾಜೇಂದ್ರ ಪ್ರಸಾದ ಯುವಕ ಮಂಡಳ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ್ದ 55 ಕೆಜಿ ತೂಕದ ಒಳಗಿನವರಿಗಾಗಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯ ಎಲ್.ಬಿ. ಪೂಜಾರ ಮಾತನಾಡಿದರು. ನಿಜಗುಣಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಚಂದ್ರಶೇಖರಯ್ಯ ಯಾವಗಲ್ಲಮಠ, ಶಿವಪುತ್ರಪ್ಪ ಇಟಗಿ, ಆದಪ್ಪ ಹಂಡಿ, ಬಾಳಪ್ಪ ಹಂಡಿ, ಶರಣಪ್ಪ ಮಾಡಲಗೇರಿ, ಸುಭಾಸ ತಳವಾರ, ರಮೇಶ ಪತ್ತಾರ, ಈರಪ್ಪ ಇಟಗಿ, ಸಂಗಪ್ಪ ಬಗಲಿ, ಬಸನಗೌಡ ಪಾಟೀಲ, ಯಲ್ಲಪ್ಪ ಮಾಡಲಗೇರಿ, ಎ.ಬಿ. ಶಿರಗುಂಪಿ, ಸಂಗಯ್ಯ ನೀರಲಗಿಮಠ, ಕೆ.ಕೆ. ಹಂಡಿ, ಮುತ್ತಪ್ಪ ಮಾಡಲಗೇರಿ, ರುದ್ರಪ್ಪ ಹಂಡಿ, ನಿಂಗನಗೌಡ ನವಲಗುಂದ ಇದ್ದರು. ವಿ.ಎಸ್. ಹಿರೇಮಠ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement