ಕರವೇ ನಾಡ ಸೇವೆ ಶ್ಲಾಘನೀಯ: ರೇವಡಿ
ಗಜೇಂದ್ರಗಡ: ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿ ರಕ್ಷಣೆಗೆ ಯುವಕರು ವೀರ ಸೇನಾನಿಗಳಂತೆ ಒಗ್ಗಟ್ಟಿನಿಂದ ಹೋರಾಟ ಮಾಡುವುದು ಅನಿವಾರ್ಯ ಎಂದು ಪುರಸಭೆ ಸದಸ್ಯ ಶರಣಪ್ಪ ರೇವಡಿ ಹೇಳಿದರು. ಈಚೆಗೆ ಸಮೀಪದ ರಾಜೂರು ಗ್ರಾಮದಲ್ಲಿ ಕರವೇ ತಾಲೂಕು ಘಟಕದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೆಡಿಎಸ್ ಮುಖಂಡ ಡಾ. ಮಂಜುನಾಥ ವಿಶ್ವಬ್ರಾಹ್ಮಣ ಮಾತನಾಡಿದರು. ಜಿಲ್ಲಾ ಸೇವಾರತ್ನ ಪ್ರಶಸ್ತಿ ಪುರಸ್ಕೃತ ವೆಂಕಟೇಶ ದ್ವಾಸಲಕೇರಿ ಅವರನ್ನು ಸನ್ಮಾನಿಸಲಾಯಿತು. ಕನಕಪ್ಪ ಪೂಜಾರ ಸಾನ್ನಿಧ್ಯ ವಹಿಸಿದ್ದರು. ಕರವೇ ತಾಲೂಕು ಅಧ್ಯಕ್ಷ ಶರಣಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಲಲಿತಾ ಪೂಜಾರ, ಎಸ್.ಟಿ ಮಾದರ, ಪ್ರಕಾಶ ಹೊಸಳ್ಳಿ, ಎಚ್.ಎಸ್.ಜೋಗಣ್ಣವರ, ಸಂಗಪ್ಪ ಯಲಬುಣಚಿ ಉಪಸ್ಥಿತರಿದ್ದರು.