ಗೋಹತ್ಯೆ ತಡೆಗೆ ಜಾಗೃತಿ ಅಗತ್ಯ: ಬ್ಯಾಹಟ್ಟಿ
ಗದಗ: ರೈತರ ಜೀವನಾಡಿಯಾದ ಬಸವಣ್ಣನನ್ನು ಸರಿಯಾದ ಆಹಾರದೊಂದಿಗೆ ಸಲುಹಿದರೆ ರೈತನಿಗೆ ಬಡತನವೇ ಇಲ್ಲವಾಗುತ್ತದೆ. ಸರ್ಕಾರ ಗೋಹತ್ಯೆ ತಡೆಗೆ ಜಾಗೃತಿ ಮೋಡಿಸಬೇಕು ಎಂದು ಸಂಘದ ಗೌರವಾಧ್ಯಕ್ಷ ಸಂಗಪ್ಪ ಬ್ಯಾಹಟ್ಟಿ ಹೇಳಿದರು. ಅವರು ಶುಕ್ರವಾರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಬೂದೀಶ್ವರ ವಿವಿಧೋದ್ದೇಶ ಯುವಕ ಮಂಡಳದ ಆಶ್ರಯದಲ್ಲಿ ಗ್ರಾಮೀಣ ರೈತರ ಜೋಡೆತ್ತಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಯುವಕ ಮಂಡಳದ ಅಧ್ಯಕ್ಷ ಹನುಮಂತ ಚಾಕಲಬ್ಬಿ, ಕಾರ್ಯದರ್ಶಿ ರಮೇಶ ಗೊಭ್ಭರಗುಂಪಿ, ಸದಸ್ಯ ಹನುಮಂತ ಬೆಟಗೇರಿ, ಮಹಾಂತೇಶ ಹಸಬಿ, ಎ.ವಿ. ಪ್ರಭು ಚನ್ನಪ್ಪ ಬ್ಯಾಹಟ್ಟಿ, ಮಲ್ಲಪ್ಪ ಲೋಟಗೇರಿ, ಸೋಮಪ್ಪ ಮಾಡಳ್ಳಿ, ಮಂಜುನಾಥ ಗೌರಿ, ಪ್ರಭು ಹಾವಣ್ಣನವರ, ಶರಣಪ್ಪ ಬ್ಯಾಹಟ್ಟಿ, ವರಣೇಶ ಕುರಿ, ಬೂದೇಶ ಬ್ಯಾಹಟ್ಟಿ, ಬಸವರಾಜ ಮುಳಗುಂದ, ಪ್ರವೀಣ ಮಡಿವಾಳರ, ಪ್ರಭು ಸಾಲಿಮಠ ಇದ್ದರು.
ರೋಟರಿ ಕ್ಲಬ್ ಗದಗ-ಬೆಟಗೇರಿ ಸಾಪ್ತಾಹಿಕ ಸಭೆ
ಗದಗ: ರೋಟರಿ ಕ್ಲಬ್ ಗದಗ, ಬೆಟಗೇರಿ ಸಾಪ್ತಾಹಿಕ ಸಭೆಯು ಈಚೆಗೆ ರೋಟರಿ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ಅಧ್ಯಕ್ಷತೆಯಲ್ಲಿ ನಗರದ ರೊಟರಿ ಐ ಕೇರ್ ಸೆಂಟರನಲ್ಲಿ ಜರುಗಿತು. ಸಭೆಯಲ್ಲಿ ಮೂತ್ರ ಕೋಶ ರೋಗ ತಜ್ಞ ಡಾ. ಶರಣ ಆಲೂರು ಆಗಮಿಸಿ ಸಾಮಾನ್ಯ ಮೂತ್ರ ಕೋಶ ರೋಗ ಕುರಿತು ಉಪನ್ಯಾಸ ನೀಡಿದರು. ಸಭೆಯಲ್ಲಿ ಎಸ್.ಎಫ್. ಬೆನಕಣ್ಣವರ, ಎಸ್.ವಿ. ಇಟಗಿ, ಎಸ್.ವಿ. ಹುಬ್ಬಳ್ಳಿ, ವಿಶ್ವನಾಥ ಯಳಮಲಿ, ಎ.ಎಂ. ಗೌಡರ, ಡಾ.ಎಸ್.ಎಲ್. ಹಕ್ಕಾಪಕ್ಕಿ, ಡಾ.ಆರ್.ಎಸ್. ಬಳ್ಳಾರಿ, ಎ.ಟಿ. ಅಕ್ಕಿ, ಡಾ.ಎ.ಡಿ. ಪಾಟೀಲ, ಉಮೇಶ ಪುರದ, ಬಿ.ಎನ್. ಪಾಟೀಲ, ಕಿಶೋರ ರೇವಣಕರ ಉಪಸ್ಥಿತರಿದ್ದರು.