ವೀರಶೈವರ ಒಗ್ಗೂಡಿಸುವ ಯತ್ನ ಆಗಲಿ
ಗದಗ: ಸರ್ವರ ಕ್ಷೇಮಾಭಿವೃದ್ಧಿಯ ಜತೆಗೆ ನಾಡಿನಲ್ಲಿರುವ ಸಂಪೂರ್ಣ ವೀರಶೈವ ಸಮಾಜ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಂಘಟನೆಗಳು ಕೆಲಸ ಮಾಡಬೇಕು ಎಂದು ಕಾಶೀ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಶನಿವಾರ ಬೆಟಗೇರಿಯ ಜ. ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಗದಗ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಸಣ್ಣ ಮಲ್ಲಾಡದ ಮಾತನಾಡಿದರು. ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ನಿರ್ಮಲಾ ಹಿರೇಮಠ, ಮಾಂತೇಶ ಕಾರಡಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ನೇತೃತ್ವವನ್ನು ಶಿರಾದ ಸಿದ್ದಲಿಂಗರಾದ್ಯ ಶಿವಾಚಾರ್ಯರು ವಹಿಸಿದ್ದರು. ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ ಉದ್ಘಾಟಿಸಿದರು. ನೂತನ ಘಟಕದ ಪಧಿಕಾರಿಗಳ ಪದ ಗ್ರಹಣವನ್ನು ಬೆಟದಯ್ಯ ಹಿರೇಮಠ ಹಾಗೂ ಶಶಿಕಲಾ ಚಿಕ್ಕಮಠ ನೆರವೇರಿಸಿದರು.