ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶರಣ ಸಂಸ್ಕೃತಿಯಿಂದ ಪ್ರೇರಿತ ಬದುಕು ನಮ್ಮದಾಗಲಿ: ದೊಡಮನಿ

Rashmi Kasaragodu
Updated On : 4 May 2014, 12:56 pm

ಗದಗ: ಶರಣ ಸಂಸ್ಕೃತಿಯಿಂದ ಪ್ರೇರಿತ ಬದುಕು ನಮ್ಮದಾಗಬೇಕು ಎಂದು ಅಥಣಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಜೆ.ಪಿ. ದೊಡಮನಿ ಹೇಳಿದರು.
ಅವರು ಶುಕ್ರವಾರ ಜ. ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಬಸವ ಜಯಂತಿ ನಿಮಿತ್ತ ಜ. ತೋಂಟದಾರ್ಯ ಜಾತ್ರಾ ಸಮಿತಿ, ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿಮಠ ಪ್ರತಿಭಾ ಪ್ರತಿಷ್ಠಾನ, ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ ಬಸವಕೇಂದ್ರದ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಗುಲ್ಬರ್ಗದ ಪೀಪಲ್ಸ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಮಾರುತಿರಾವ್ ಮಾಳೆ ಅವರನ್ನು ಸನ್ಮಾನಿಸಲಾಯಿತು. ಜ. ತೋಂಟದಾರ್ಯ ಮಠದ ಲಿಂಗಾಯತ ಅಧ್ಯಯನ ಸಂಸ್ಥೆಯಿಂದ ಪ್ರಕಟಿತ ಪ್ರಕಾಶ ಗಿರಿಮಲ್ಲಣ್ಣವರ ಬರೆದ ಡಾ. ಎಚ್. ತಿಪ್ಪೇರುದ್ರಸ್ವಾಮಿ, ನಿಪ್ಪಾಣಿಯ ಡಾ. ರಾಜಶೇಖರ ಇಚ್ಚಂಗಿ ಬರೆದ ರುದ್ರಪ್ಪ ಕೋಠಿವಾಲೆ ಗ್ರಂಥಗಳ ಬಿಡುಗಡೆ ಜರುಗಿತು.
ಅಣ್ಣಿಗೇರಿಯ ಅಮೃತೇಶ್ವರ ಪಪೂ ಕಾಲೇಜು ಪ್ರಾಧ್ಯಾಪಕ ಡಾ. ಎಚ್.ಬಿ. ಪೂಜಾರ ಆಶಯ ಭಾಷಣ ಮಾಡಿದರು. ತಮಿಳುನಾಡಿನ ಕುಂಭಕೋಣಂನ ವೀರಶೈವ ಪೆರಿಯ ಮಠದ ನೀಲಕಂಠಸಾರಂಗ ದೇಶಿಕೇಂದ್ರ ಶ್ರೀಗಳು ಸಮ್ಮುಖ ವಹಿಸಿದ್ದರು. ರೇವಣಸಿದ್ದಯ್ಯ ಮರಿದೇವರಮಠ ಅವರಿಂದ ವಚನ ಸಂಗೀತ ನಡೆಯಿತು. ಜಾತ್ರಾ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳೊಳ್ಳಿ ಸ್ವಾಗತಿಸಿದರು. ಜಿ.ಪಿ. ಕಟ್ಟಿಮನಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement