ಶರಣರ ಜಯಂತಿಗೆ ಗಂಜಿ ಬಸವೇಶ್ವರ ಜಾತ್ರೆ ಮಾದರಿ
ಗದಗ: ವೀರಶೈವ ಧರ್ಮದ ಸಂಸ್ಥಾಪಕ ಆಚಾರ್ಯರು ಹಾಗೂ ಬಸವಣ್ಣನವರ ಜಯಂತಿಯನ್ನು ಗಂಜಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಆಚರಿಸುತ್ತಿರುವುದು ಅನುಕರಣೀಯ ಎಂದು ಕಾಶೀ ಪೀಠದ ಜಂಗನವಾಡಿ ಮಠದ ಜ. ಚಂದ್ರಶೇಖಕ ಶಿವಾಚಾರ್ಯರು ಹೇಳಿದರು.
ಅವರು ನಗರದ ಉಸುಗಿನಗಟ್ಟಿ ಓಣಿಯ ಗಂಜಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಆಂಧ್ರದಲ್ಲಿ ಜ. ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಜೂ. 8ರಂದು ಆಚರಿಸುತ್ತಿದ್ದೇವೆ ಎಂದರು.
ದೇವಸ್ಥಾನದ ಟ್ರಸ್ಟ್ ಕಮಿಟಿ ಸದಸ್ಯ ನಿಂಗಪ್ಪ ಪಡಗದ ಮಾತನಾಡಿದರು. ವಿಜಯಕುಮಾರ ಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಾತ್ರಾ ಕಮಿಟಿ ಅಧ್ಯಕ್ಷ ಬಸಯ್ಯ ಹಿರೇಮಠ, ಪ್ರಭು ಕಲಬಂಡಿ, ಮಂಜುನಾಥ ಲಕ್ಕುಂಡಿ, ಶಂಕರ ಕರಭಿಷ್ಠಿ, ಲಿಂಗರಾಜ ಕೆಂಭಾವಿಮಠ, ನಗರಸಭೆ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಸದಸ್ಯ ಬರಕತಅಲಿ ಮುಲ್ಲಾ, ಅನಿಲ ಗರಗ, ಎಚ್.ಕೆ. ಮುಲ್ಲಾ, ಉಳವಪ್ಪ ಹೊಂಬಳ, ಗುರುಶಾಂತಗೌಡ ಮರಿಗೌಡ್ರ, ಬಸವರಾಜ ಶಾಬಾದಿಮಠ, ಬಾಬಣ್ಣ ಶಾಬಾದಿಮಠ, ರೇವಯ್ಯ ಹಿರೇಮಠ, ಬಸಪ್ಪ ಕಲಬಂಡಿ, ಕರಬಸಯ್ಯ ನಾಲತ್ತವಾಡಮಠ, ಈರಣ್ಣ ಗಡಗಿಶೆಟ್ಟರ, ಉಮೇಶ ಮುಳ್ಳಾಳ, ಪರೂತ ಕಮತರ, ಮಾರ್ತಾಂಡಪ್ಪ ಹಾದಿಮನಿ ಮುಂತಾದವರು ಆಗಮಿಸಿದ್ದರು.