ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸರ್ವೋತ್ತಮ ಸಮಾಜ ನಿರ್ಮಾಣದ ಹರಿಕಾರ ಬಸವಣ್ಣ

Rashmi Kasaragodu
Updated On : 4 May 2014, 12:53 pm

ಗದಗ: ಬಸವಣ್ಣನವರು ಬಡವ ಶ್ರೀಮಂತರೆನ್ನದೇ ಎಲ್ಲರನ್ನೂ ಸಮಾನ ಭಾವನೆಯಿಂದ ಕಾಣುತ್ತಿದ್ದವರು. ಸರ್ವೋತ್ತಮ ಸಮಾಜ ನಿರ್ಮಾಣದ ಹರಿಕಾರರು ಬಸವಣ್ಣನವರು ಎಂದು  ಬಿಜೆಪಿ ಎಸ್ಟಿ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ ಬೆಳಧಡಿ ಹೇಳಿದರು. ಅವರು ಗದಗ ಜಿಲ್ಲಾ ಬಿಜೆಪಿ ಎಸ್ಟಿ ಘಟಕದಿಂದ ಶುಕ್ರವಾರ ಹಮ್ಮಿಕೊಂಡ ಬಸವ ಜಯಂತ್ಯುತ್ಸವದ ನೇತೃತ್ವ ವಹಿಸಿ ಮಾತನಾಡಿದರು. ಉಳ್ಳವರು ಶಿವಾಲಯ ಮಾಡುವರು ನಾನೆನು ಮಾಡಲಿ ಬಡವನೆಯ್ಯಾ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರಹೊನ್ನ ಕಳಸವಯ್ಯ ಸ್ಥಾವರಕಳಿವುಂಟು ಜಂಗಮಕ್ಕಳಿವುಂಟು ಜಂಗಮಕ್ಕಳಿವಿಲ್ಲ. ಇದನ್ನೆ ಬಸವಣ್ಣನವರು ದೇವಾಲಯಗಳ ನಿರಾಕರಣೆ ಮಾಡಿದರು ಎಂದರು. ಚಂದ್ರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷಯ, ಪ್ರಶಾಂತ, ಮಂಜು, ರಾಘು, ಅರ್ಜುನ, ಅಸ್ಲಂ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.


ಶಿವಾಜಿ ಜಯಂತಿಗೆ ರಜೆ ಘೋಷಿಸಲು ಆಗ್ರಹ


ಗಜೇಂದ್ರಗಡ: ಛತ್ರಪತಿ ಶಿವಾಜಿ ಅಖಂಡ ಹಿಂದುತ್ವ ಉಳಿವಿಕೆಗಾಗಿ, ದೇಶ ಸೇವೆಗಾಗಿ ಜೀವನವನ್ನೇ ಪಣವಾಗಿಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಛತ್ರಪತಿ ಶಿವಾಜಿ ಜಯಂತಿಯನ್ನು ಸರ್ಕಾರಿ ರಜೆಯನ್ನಾಗಿ ಘೋಷಿಸಬೇಕು ಎಂದು ಸರ್ಕಾರಕ್ಕೆ ಶಿಲ್ಪಿ ಹನಮಂತರಾವ್ ಗಾಯಕವಾಡ ಆಗ್ರಹಿಸಿದರು. ಈಚೆಗೆ ಸಮೀಪದ ಉಣಚಗೇರಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಯುವಕ ಮಂಡಳ ವತಿಯಿಂದ ನಡೆದ ಛತ್ರಪತಿ ಶಿವಾಜಿ ಮಹಾರಾಜರ 387ನೇ ಜಯಂತಿ, ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆ ಛತ್ರಪತಿ ಶಿವಾಜಿ ಮಹಾರಾಜರ ತತ್ವಾದರ್ಶ ಹಾಗೂ ಅವರಲ್ಲಿನ ನೆಲ, ದೇಶಪ್ರೇಮ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಕೊಂಡು ಬಾಳಬೇಕು ಎಂದರು. ರಾಮಚಂದ್ರಪ್ಪ ಅರಗಂಜಿ, ಮುದಿಯಪ್ಪ ಪವಾರ, ಫಿರೊಜ ಅರಗಂಜಿ, ಮುತ್ತು ಪವಾರ, ಸಂತೋಷ ಜಾಧವ, ರವಿ ಘಾಟಗೆ, ಮಂಜುನಾಥ ಪವಾರ, ಗಣೇಶ ಗಾಯಕವಾಡ, ಶಿವಣ್ಣ ಪವಾರ, ಬಸನಗೌಡ ಪಾಟೀಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement