ಸಾಮೂಹಿಕ ವಿವಾಹ ದುಂದುವೆಚ್ಚಕ್ಕೆ ತಡೆ
ಶಿಗ್ಗಾಂವಿ: ಆಡಂಬರದ ಜೀವನಕ್ಕೆ ಮಾರು ಹೋಗದೆ ಸಾಮೂಹಿಕ ವಿವಾಹ ನಡೆಸುವುದರಿಂದ ಒಳ್ಳೆಯ ಜೀವನ ಮಾರ್ಗಕ್ಕೆ ದಾರಿಯಾಗಲಿದೆ ಎಂದು ವಿಪ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.
ತಾಲೂಕಿನ ಅಡವಿಸೋಮಾಪುರ ಗ್ರಾಮದ ಶರಣ ಬಸವೇಶ್ವರ ಮಹಾಮಂಟಪದಲ್ಲಿ ಶರಣಬಸವೇಶ್ವರರ 25ನೇ ವರ್ಷದ ಪುರಾಣ ಮಹಾ ಮಂಗಲೋತ್ಸವ, ಕುಂಭೋತ್ಸವ, 21 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹೊಸ ಜೀವನಕ್ಕೆ ಕಾಲಿಡುತ್ತಿರುವ ವಧೂ-ವರರು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಹಾರೈಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೂತನ ವಧೂ-ವರರು ನಮ್ಮ ಧಾರ್ಮಿಕ ಆಚರಣೆ ಪಾಲಿಸುವ ಜತೆಗೆ ಉತ್ತಮ ಸಂಸ್ಕೃತಿ ಅಳವಡಿಸಿಕೊಳ್ಳಬೇಕು. ಗುರು-ಹಿರಿಯರನ್ನು ಗೌರವಿಸಬೇಕು. ಜತೆಗೆ ಉತ್ತಮ ಜೀವನ ನಡೆಸಬೇಕು ಎಂದರು.
ಶಿವಾನಂದ ಮ್ಯಾಗೇರಿ, ಇತರರು ಮಾತನಾಡಿದರು. ಜಿಪಂ ಸದಸ್ಯ ಸಿ.ಎಸ್. ಪಾಟೀಲ, ತಾ ಪಂ ಸದಸ್ಯೆ ಸುನಂದಾ ಘೋಡಖೆ, ಗ್ರಾಪಂ ಅಧ್ಯಕ್ಷ ಗೋವಿಂದ ದುಂಡಪ್ಪನವರ, ಮಾಜಿ ಸದಸ್ಯರಾದ ಶಿದ್ದನಗೌಡ್ರ ಪಾಟೀಲ, ಗುರುನಗೌಡ್ರ ಪಾಟೀಲ, ಗಂಗಣ್ಣ ಹುಲ್ಲೂರ, ಸುರೇಶಗೌಡ್ರ ಪಾಟೀಲ ಇತರರು ಪಾಲ್ಗೊಂಡಿ ದ್ದರು. ಸುರೇಶ ಬೇಂಡಿಗೇರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.