ಸುಂದರ ಬದುಕು ರೂಪಗೊಳ್ಳಲು ಧರ್ಮ ಮಾರ್ಗದಲ್ಲಿ ನಡೆಯಿರಿ
ಗದಗ: ನಮ್ಮ ಬದುಕನ್ನು ಸುಂದರಮಯವಾಗಿ ರೂಪಿಸಿಕೊಳ್ಳಬೇಕಾದರೆ ಎಲ್ಲ ಕೆಲಸ ಕಾರ್ಯಗಳು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಬೂದೀಶ್ವರ ಶ್ರೀಗಳು ಹೇಳಿದರು. ಅವರು ಗುರುವಾರ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ 7ನೇ ವಾರ್ಷಿಕೋತ್ಸವದ ಅಂಗವಾಗಿ ಜರುಗಿದ ಸಾಮೂಹಿಕ ವಿವಾಹಗಳ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ತಾಪಂ ಸದಸ್ಯ ಪ್ರಹ್ಲಾದ್ ಹೊಸಳ್ಳಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚನ್ನಪ್ಪ ಅಂಗಡಿ, ನಿವೃತ್ತ ಶಿಕ್ಷಕ ಎಸ್.ಡಿ. ಉಮ್ಮಣ್ಣವರ, ಎಸ್.ಡಿ. ತಳವಾರ, ಗಣೇಶ ಜಡಿ, ಫಕ್ಕೀರಪ್ಪ ಜಡಿ, ಮಲ್ಲಪ್ಪ ಹೊಸಳ್ಳಿ, ಕುಬೇರಪ್ಪ ಹುಲಗಣ್ಣವರ, ಉಮೇಶ ಪೂಜಾರ, ಅರವಿಂದ್ರಪ್ಪ ಚಿಕ್ಕಣ್ಣವರ, ಈರಪ್ಪ ಮಾವರಿ, ಮಂಜುನಾಥ ಹಿರೇಮಠ, ಮಲ್ಲಪ್ಪ ಹರ್ತಿ ಇದ್ದರು. ಅರುಣ ಅಣ್ಣಿಗೇರಿ ಸ್ವಾಗತಿಸಿದರು. ಲಕ್ಷ್ಮಣ ದೊಡ್ಡಮನಿ ನಿರೂಪಿಸಿದರು.
ಗಜೇಂದ್ರಗಡ: ಖತ್ನಾ
ವೈಜ್ಞಾನಿಕ ಮಹತ್ವ ಪಡೆದಿದೆ
ಗಜೇಂದ್ರಗಡ: ಖತ್ನಾ ವೈಜ್ಞಾನಿಕವಾಗಿ ಮಹತ್ವ ಪಡೆದಿದೆ ಎಂದು ಹಾವೇರಿ ಲೋಕಸಭೆ ಕ್ಷೇತ್ರ ಉಪಾಧ್ಯಕ್ಷ ಮಿಥುನ್ ಪಾಟೀಲ ಹೇಳಿದರು. ಸ್ಥಳೀಯ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಈಚೆಗೆ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಸಮಾಜದ ಬಡ ಮಕ್ಕಳಿಗೆ ಉಚಿತ ಖತ್ನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪುರಸಭೆ ವಿಪಕ್ಷ ನಾಯಕ ಶಿವರಾಜ ಮಾತನಾಡಿದರು. ಡಾ. ಹಸನಲಿ ಹೊಸಳ್ಳಿ, ಡಾ. ರುಕ್ಸಾನಾ ಹೊಸಳ್ಳಿ ಅವರು 110 ಮಕ್ಕಳಿಗೆ ಖತ್ನಾ ನೆರವೇರಿಸಿದರು. ಮೌಲಾನಾ ಮಹಮ್ಮದ ಜಮಾ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಮಿಟಿ ಮುಖ್ಯಸ್ಥ ಎಂ.ಎಚ್. ಕೋಲಕಾರ ಅಧ್ಯಕ್ಷತೆ ವಹಿಸಿದ್ದರು. ಸುಭಾನಸಾಬ್ ಆರಗಿದ್ದಿ, ಹಾಜಿ ಎ.ಆರ್. ಗೊಡೇಕಾರ, ಎ.ಜಿ. ತಾಳಿಕೋಟೆ, ಹಸನ ತಟಗಾರ, ರವಿ ಗಡೇದವರ, ಅರ್ಜುನ ರಾಠೋಡ, ಡಿ.ಬಿ. ವಣಗೇರಿ, ದಾದು ಹಣಗಿ ಇದ್ದರು.