ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಸ್ ದರ ಏರಿಕೆ: ಖಂಡನೆ

Lingaraj Badiger
Updated On : 5 May 2014, 11:41 am

ನರಗುಂದ: ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಜನತೆಗೆ ಮತ್ತು ಜಾನುವಾರುಗಳಿಗೆ ಕುಡಿಯಲಿಕ್ಕೆ ನೀರು ಇಲ್ಲದೇ ಪರದಾಡುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಸ್ ದರ ಏರಿಕೆ ಮಾಡಿದ್ದು ಖಂಡನಾರ್ಹವೆಂದು ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಜೂನ್ ತಿಂಗಳಲ್ಲಿ, ಸರ್ಕಾರಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಅವುಗಳನ್ನು ಪುನಶ್ಚೇತನ ಮಾಡಲಿಕ್ಕೆ ಬಸ್ ದರ ಏರಿಕೆ ಅನಿವಾರ್ಯ ಎಂದು ನೆಪ ಹೇಳಿ ದರ ಏರಿಕೆ ಮಾಡಿ ಜನತೆ ಬಾಯಿ ಮುಚ್ಚಿಸಿ, ಈಗ ಬಸ್ ದರ ಏರಿಕೆ ಮಾಡಿದ್ದಾರೆ ಎಂದರು. ಬಸನಗೌಡ ಚಿಕ್ಕನಗೌಡರ್, ಅಣ್ಣಪ್ಪಗೌಡ ಪಾಟೀಲ (ಮೂಗನೂರ), ಚಳಪ್ಪ ನಾಯ್ಕರ, ರುದ್ರಪ್ಪ ಗಾಣೆಗೇರ, ಅಲ್ಲಿಬಾಸ ನಧಾಪ್, ಗುರುಶಾಂತ ನರಸಾಪೂರ, ಬಸಪ್ಪ ಗುಡೇದರಿ, ಎಂ.ಟಿ. ಬದಾಮಿ ಹಾಜರಿದ್ದರು.
ಇಂದು ನಾಟಕ ಪ್ರದರ್ಶನ
ರೋಣ: ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಮಾರುತೇಶ್ವರ ಜಾತ್ರಾ ನಿಮಿತ್ತವಾಗಿ ಮಾರುತೇಶ್ವರ ನಾಟಕ ಸಂಘ ಅವರಿಂದ ಮೇ 5ರಂದು ರಾತ್ರಿ ಗಂಡುಗಲಿ ವೀರ ಪರಶುರಾಮ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಹುನಗುಂಡಿ ಗ್ರಾಪಂ ಉಪಾಧ್ಯಕ್ಷ ಬಸವಂತಪ್ಪ ತಳವಾರ ನಾಟಕ ಕಾರ್ಯಕ್ರಮ ಉದ್ಘಾಟಿಸಿವರು.
ಇಂದು ಧರ್ಮಸಭೆ
ನರಗುಂದ: ನಗರದ ಅರ್ಬಾಣ ಕುಂಬಾರ ಓಣಿಯಲ್ಲಿ ನೂತನವಾಗಿ ನಿರ್ಮಿಸಿದ ಮಂಜುನಾಥ ಸ್ವಾಮಿ ದೇವಸ್ಥಾನದ ಉದ್ಘಾಟನೆ ಹಾಗೂ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದ ಅಂಗವಾಗಿ ಮೇ 5ರಂದು ದೇವಸ್ಥಾನ ಆವರಣದಲ್ಲಿ ಧರ್ಮಸಭೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement