ರಸ್ತೆ ಬದಿ ನಿರೋಧ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 4
ಜನಸಂಖ್ಯೆ ನಿಯಂತ್ರಣ ಮಾಡುವಲ್ಲಿ ಪ್ರಮುಖವಾಗಿರುವ ಹಾಗೂ ಭಯಂಕರ ಏಡ್ಸ್ ರೋಗ ನಿಯಂತ್ರಣ ಮಾಡುವಲ್ಲಿ ನಿರೋಧ ಪ್ಯಾಕೆಟ್ಗಳನ್ನು ಪಟ್ಟಣದ ಇಟ್ಟಿಗೆರೆ ಕೆರೆ ಹತ್ತಿರದ ಪಾಳಾ ಬಾದಾಮಿ ರಸ್ತೆಯ ಬದಿಯಲ್ಲಿ ಬಿಸಾಕಿ ಹೋಗಿರುವ ಘಟನೆ ಭಾನುವಾರ ಜರುಗಿದೆ.
ಜನಸಂಖ್ಯೆ ನಿಯಂತ್ರಣಕ್ಕೆ ಅತಿ ಉಪಯುಕ್ತವಾದ ಮತ್ತು ಉಚಿತವಾಗಿ ನೀಡಲಾಗುತ್ತಿರುವ ನಿರೋಧ ರಸ್ತೆ ಬದಿಯಲ್ಲಿ ಬಿದ್ದು ಹಾಳಾಗಿ ಹೋಗುತ್ತಿರುವುದು ದುರಂತದ ಸಂಗತಿಯಾಗಿದೆ. ಇದರ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಸೂಕ್ತ ತನಿಖೆ ಮಾಡಿ ರಸ್ತೆ ಬದಿಯಲ್ಲಿ ನಿರೋಧ ಪ್ಯಾಕೆಟ್ಗಳನ್ನು ಬಿಸಾಕಿ ಹೋದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಪದ್ಮರಾಜ ಪಾಟೀಲ ಶಂಕ್ರಣ್ಣ ಬಾಳಿಕಾಯಿ, ನೀಲಪ್ಪ ಸೆರಸೂರಿ ಆಗ್ರಹಿಸಿದ್ದಾರೆ.