ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವ್ಯಕ್ತಿಗೆ ಒಮ್ಮುಖ, ವ್ಯಕ್ತಿತ್ವಕ್ಕೆ ಹಲವು ಮುಖ

Lingaraj Badiger
Updated On : 5 May 2014, 11:44 am

ಮುಂಡರಗಿ: ವ್ಯಕ್ತಿಗೆ ಒಂದು ಮುಖವಿದ್ದರೆ, ವ್ಯಕ್ತಿತ್ವಕ್ಕೆ ಹಲವಾರು ಮುಖಗಳಿರುತ್ತವೆ. ಇದಕ್ಕೆ ಮುಂಡರಗಿಯ ಜ. ಅನ್ನದಾನೀಶ್ವರ ಶ್ರೀಗಳೇ ಸಾಕ್ಷಿ. ಶ್ರೀಗಳು ನಾಡಿನಾದ್ಯಂತ ಸಂಚರಿಸಿ ಶಿಕ್ಷಣ, ದಾಸೋಹ, ಪುಸ್ತಕ, ಪರಿಸರ, ಕೃಷಿ ಸೇರಿದಂತೆ ಎಲ್ಲ ರಂಗದಲ್ಲಿಯೂ ತಮ್ಮ ಸೇವೆ ಸಲ್ಲಿಸಿದ್ದಾರೆ ಎಂದು ವಿಶ್ರಾಂತ ಪ್ರಾಚಾರ್ಯ ಕೆ.ಎಚ್. ಬೇಲೂರ ಹೇಳಿದರು.
ಭಾನುವಾರ ಪಟ್ಟಣದ ಜ. ಅನ್ನದಾನೀಶ್ವರ ಮಠದಲ್ಲಿ ಮಹಾಮಾನವತಾವಾದಿ ಜಗಜ್ಯೋತಿ ಬಸವಣ್ಣನವರ ಜಯಂತಿ, ಅವಿರಳ ಜ್ಞಾನಿ ಚನ್ನಬಸವಣ್ಣನವರ 919ನೇ ಜಯಂತ್ಯುತ್ಸವ ಜತೆಗೆ ಜ. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳ 73ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಜ್ಞಾನ ಹೆಸರಿನಲ್ಲಿ ನಾವಿಂದು ಸಂಪೂರ್ಣ ಅಜ್ಞಾನಿಗಳಾಗುತ್ತಿರುವುದು ವಿಷಾದನೀಯ. ಮುಂಡರಗಿ ಜ. ಡಾ. ಅನ್ನದಾನ ಶ್ರೀಗಳು ಅನ್ನದಾನದ ಜತೆಗೆ ವಿದ್ಯಾದಾನ ಮಾಡುತ್ತ ನಿರಂತರ ಅಧ್ಯಯನ ನಡೆಸುವ ಮೂಲಕ 116 ಮೌಲಿಕ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕ ಶ್ರೀಮಂತಗೊಳಿಸಿದ್ದಾರೆ. 1967ರಲ್ಲಿ ಸ್ಥಾಪನೆಗೊಂಡಿರುವ ಅನ್ನದಾನೀಶ್ವರ ಗ್ರಂಥಮಾಲೆಯಿಂದ ಶ್ರೀಗಳು ರಚಿಸಿದ 112 ಕೃತಿಗಳೂ ಸೇರಿ 214 ಕೃತಿಗಳನ್ನು ಪ್ರಕಟಿಸಿದ್ದಾರೆ.
ಶ್ರೀಗಳು ರಚಿಸಿದ ಸಾಹಿತ್ಯದ ಮೇಲೆ ಈಗಾಗಲೇ 4 ಪಿಎಚ್‌ಡಿ 2 ಎಂಫಿಲ್ ಪದವಿಗಳನ್ನು ಪಡೆದಿರುವುದು ವಿಶೇಷ. ಚನ್ನಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ, ಬಸವಣ್ಣ, ದ್ಯಾಂಪುರ ಚನ್ನಕವಿ ಮುಂತಾದ ಶರಣ 10 ವಿಚಾರ ಸಂಕಿರಣಗಳನ್ನು ನಡೆಸಿದ ಕೀರ್ತಿ ಶ್ರೀಗಳಿಗಿದೆ ಎಂದರು. ಜ. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಮಾತನಾಡಿ, ಮಠಗಳಲ್ಲಿ ಬಸವಣ್ಣನವರ ವಿಚಾರಗಳನ್ನು ಹೇಳುವುದಕ್ಕಿಂತ ಅವುಗಳನ್ನು ಆಚರಣೆಗೆ ತರುವಂತಾಗಬೇಕು. ಈ ನಿಟ್ಟಿನಲ್ಲಿ ಶ್ರೀಮಠ ಕಾರ್ಯಪ್ರವೃತ್ತವಾಗಿದೆ ಎಂದರು. ಕೆ.ಎ. ಬಳಿಗಾರ ಬಸವಣ್ಣನವರ ಸಾಮಾಜಿಕ ಮೌಲ್ಯಗಳ ಕುರಿತು ಮಾತನಾಡಿದರು.
ಕನಕಗಿರಿಯ ಡಾ. ಚನ್ನಮಲ್ಲ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಶ್ರೀಗಳು, ಮುಚಕಂಡಯ್ಯ ಹಂಗರಗಿ ಆನಂದದೇವರು ಮಾತನಾಡಿದರು. ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಲೋಕೇಶ ದೊಡ್ಡಮನಿ ಇದ್ದರು. ಇದೇ ಸಂದರ್ಭ ಮಕ್ಕಳಿಗಾಗಿ ರಚಿಸಿದ ಅನ್ನದಾನೀಶ್ವರ ವಚನಗಳು ಎಂಬ 3ನೇ ಮುದ್ರಣ ಕಂಡ ಪುಸ್ತಕ ಬಿಡುಗಡೆಗೊಳಿಸಲಾಯಿತು. ಅಂದಪ್ಪ ಬೆಲ್ಲದ, ಶಿವಲಿಂಗಪ್ಪ ಡಂಬಳ, ಕಾಂತರಾಜ ಹಿರೇಮಠ, ಶಂಕ್ರಪ್ಪ ಬಾರಿಕಾಯಿ, ಬಸವರಾಜ ದೇಸಾಯಿ, ಎಸ್.ಎಂ. ಹೊಸಮಠ, ಆರ್.ಎಲ್. ಪೊಲೀಸ್‌ಪಾಟೀಲ, ಪ್ರಾ. ಡಿ. ಪ್ರಕಾಶ, ಸಿ.ಎಸ್. ಅರಸನಾಳ, ಎನ್.ಎಫ್. ಅಕ್ಕೂರ, ವಿ.ಎಫ್. ಅಂಗಡಿ, ವೀರೇಶ ಸಜ್ಜನರ, ಬಸವರಾಜ ರಾಮೇನಹಳ್ಳಿ, ಪಾಲಾಕ್ಷಿ ಗಣದಿನ್ನಿ, ಮಂಜುನಾಥ ಮುಧೋಳ, ಪವನ್ ಜೋಪ್ರಾ, ಕುಮಾರ ಬನ್ನಿಕೊಪ್ಪ, ನಾಗರಾಜ ಗುಡಿಮನಿ, ದೇವು ಹಡಪದ, ಪರಶಾಂತ ಹಿರೇಮಠ, ಕೈಲಾಸ ಹಿರೇಮಠ ಇತರರಿದ್ದರು. ಎಸ್.ಬಿ. ಹಿರೇಮಠ ಸ್ವಾಗತಿಸಿದರು. ಪ್ರಾ. ಡಾ. ಎಂ.ಬಿ. ಬೆಳವಟಗಿಮಠ ನಿರೂಪಿಸಿದರು. ಚನ್ನವೀರಯ್ಯ ಹಿರೇಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement