ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಎಪಿಎಂಸಿ ರಸ್ತೆ ನಿರ್ಮಿಸಲು ಆಗ್ರಹ

Rashmi Kasaragodu
Updated On : 6 May 2014, 1:00 am

ಲಕ್ಷ್ಮೇಶ್ವರ: ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿನ ಮುಖ್ಯರಸ್ತೆ ನಿರ್ಮಾಣಕ್ಕಾಗಿ ವೈಟ್ ಮಿಕ್ಸರ್ ಹಾಕಿ 2-3 ತಿಂಗಳು ಕಳೆಯುತ್ತಾ ಬಂದಿದ್ದರೂ ರಸ್ತೆ ಕಾಮಗಾರಿ ಮುಗಿಯುತ್ತಿಲ್ಲ. ರಸ್ತೆಯಲ್ಲಿ ಜಲ್ಲಿ ಕಲ್ಲುಗಳು ಎದ್ದಿದ್ದು ಸಾರ್ವಜನಿಕರು ಸಂಚಾರಕ್ಕೆ ಪರದಾಡುವಂತಾಗಿದೆ.
ಪಟ್ಟಣ ಸುತ್ತಲಿನ ಜನರು ಎಪಿಎಂಸಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿಕ್ಕೆ ಬರಲು ಹಿಂದೇಟು ಹಾಕುವಂಥ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ನಿರ್ಮಿಸಲು ನೀಡಿರುವ ಟೆಂಡರ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಎಪಿಎಂಸಿ ವ್ಯಾಪಾರಸ್ಥರು ಸೋಮವಾರ ಪ್ರತಿಭಟನೆ ನಡೆಸಿ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
8-10 ತಿಂಗಳ ಹಿಂದೆ ಎಪಿಎಂಸಿಯಲ್ಲಿನ 650 ಮೀಟರ್ ಮುಖ್ಯರಸ್ತೆ ನಿರ್ಮಾಣಕ್ಕಾಗಿ ಸುಮಾರು ರು. 75 ಲಕ್ಷ ಅನುದಾನದ ಟೆಂಡರ್ ಕರೆಯಲಾಗಿದ್ದು, ಇದುವರೆಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಖಡಿಗಳನ್ನು ರಸ್ತೆಯಲ್ಲಿ ಹರಡಿ ಹೋಗಿದ್ದನ್ನು ಬಿಟ್ಟರೆ ಮತ್ತಾವ ಕಾರ್ಯ ಗುತ್ತಿಗೆದಾರರು ಮಾಡಿಲ್ಲ. ಹೊಸ ಮಾರುಕಟ್ಟೆಯಲ್ಲಿ ಸೂಕ್ತ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯವಿಲ್ಲ, ಸಂಚಾರಕ್ಕೆ ಉತ್ತಮ ರಸ್ತೆ ಇಲ್ಲದಿರುವುದರಿಂದ ವ್ಯಾಪಾರ ಕುಂಠಿತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ತಾಕೀತು ಮಾಡಬೇಕು. ಇಲ್ಲವಾದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಕಾರ್ಯದರ್ಶಿ ಎಸ್.ಆರ್. ಈರಣ್ಣ ಅವರಿಗೆ ಆಗ್ರಹಿಸಿದರು. ಬರುವ 10-12 ದಿನಗಳಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ಎಪಿಎಂಸಿ ವರ್ತಕ ಗುರುಪಾದಯ್ಯ ಗಡ್ಡದೇವರಮಠ, ಪರಮೇಶ ಬಾಳಿಕಾಯಿ, ವೀರಣ್ಣ ಅಕ್ಕೂರ, ಎಫ್.ಎಸ್. ಗಂಟಿ, ವಿ.ಎ. ಅಳವಂಡಿ, ಎಸ್.ಎ. ಓದುನವರ, ಎಂ.ಎಚ್. ಚಕ್ರಸಾಲಿ, ಎಸ್.ಪಿ. ಮಾನ್ವಿ, ಎಂ.ಎನ್. ಪಾಟೀಲ, ವಿ.ಸಿ. ಉಪಾಧ್ಯ, ವಿ.ಪಿ. ಬಡಿಗೇರ, ಸಿದ್ದಪ್ಪ ಗದ್ದಿ, ನಾಗರಾಜ ಶಿರಬಡಗಿ, ಲೆಂಕೆಪ್ಪ ಗದ್ದಿ, ಶರಣಪ್ಪ ವಗ್ಗರ, ನೀಲಕಂಠಪ್ಪ ಓದುನವರ, ಮಲ್ಲಪ್ಪ ಗದ್ದಿ, ಬಿ.ಬಿ. ಕಲ್ಲಪ್ಪನವರ ಇತರರು ಭಾಗವಹಿಸಿದ್ದರು.
ಮನವಿ ಸ್ವೀಕರಿಸಿದ ಕಾರ್ಯದರ್ಶಿ ಎಸ್.ಆರ್. ಈರಣ್ಣ, ಗುತ್ತಿಗೆದಾರರಿಗೆ ಈಗಾಗಲೇ ಹಲವಾರು ಬಾರಿ ರಸ್ತೆ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಎಚ್ಚರಿಕೆ ನೀಡಲಾಗಿದೆ. ವಾರದೊಳಗಾಗಿ ಕಾಮಗಾರಿ ಪೂರ್ಣಗಳಿಸದಿದ್ದರೆ ಗುತ್ತಿಗೆದಾರರ ಮೇಲೆ ಶಿಸ್ತು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement