ನೀರಾವರಿ ಕಾಲುವೆ ಮಾರ್ಗ ಬದಲಿಸಿ: ಧರಣಿ
ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿಯ ಮುಸ್ಲಿಂ ಸಮಾಜದ ಖಬರಸ್ಥಾನದ ಮೂಲಕ ಹಾಯ್ದ ಹೋಗಲಿರುವ ಸಿಂಗಟಾಲೂರ ಏತ ನೀರಾವರಿ ಯೋಜನೆ ಕಾಲುವೆ ಮಾರ್ಗ ಬದಲಾವಣೆ ಮಾಡುವಂತೆ ಆಗ್ರಹಿಸಿ ಸೋಮವಾರ ಗ್ರಾಮದ ಅಂಜುಮನ್ ಏ ಇಸ್ಲಾಂ ಕಮಿಟಿಯ ವತಿಯಿಂದ ಧರಣಿ ಸತ್ಯಾಗ್ರಹ ಆರಂಭಿಸಿದೆ.
ಗ್ರಾಮದ ಮುಸ್ಲಿಂ ಸಮಾಜಕ್ಕೆ ಸೇರಿದ ಖಬರಸ್ಥಾನದ ಸ್ಥಳದಲ್ಲಿ ಕಾಲುವೆ ನಿರ್ಮಾಣ ಮಾಡಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ, ಖಬರಸ್ಥಾನದ ಸ್ಥಳವನ್ನು ಬಿಟ್ಟು ಕಾಲುವೆ ಮಾರ್ಗವನ್ನು ಬದಲಾವಣೆ ಮಾಡಬೇಕೆಂದು ಗ್ರಾಮದ ಸಮಸ್ತ ಮುಸ್ಲಿಂ ಸಮಾಜ ಬಾಂಧವರು ಖಬರಸ್ಥಾನದ ಸ್ಥಳದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.
ಅಧ್ಯಕ್ಷ ಕಾಶೀಮಸಾಬ್ ಹರಿವಾಣ, ಕಾರ್ಯದರ್ಶಿ ಎಸ್.ಎಫ್. ಮಿಶ್ರಿಕೋಟಿ, ಚಂದೂಸಾಬ್ ಕುಮನೂರ, ದಾವಲಸಾಬ್ ಹುಯಿಲಗೋಳ, ಜಿನ್ನಾಸಾಬ್ ಮುಲ್ಲಾನವರ, ಜಮಾಲಸಾಬ್ ಬೇಲೇರಿ, ಬಾಲೇಸಾಬ್ ಪೆಂಡಾರಿ, ಹುಸೇನಸಾಬ್ ನದಾಫ್, ರಾಜೇಸಾಬ್ ಪೆಂಡಾರಿ, ಹನೀಪಸಾಬ್ ಮುಲ್ಲಾನವರ ಮತ್ತು ಮುಸ್ಲಿಂ ಬಾಂಧವರು ಸೇರಿದಂತೆ ಮಹಿಳೆಯರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.