ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವ್ಯಕ್ತಿ ಅಧ್ಯಯನದ ಕುರಿತು ದತ್ತಾಂಶಗಳ ಸಂಗ್ರಹ

Rashmi Kasaragodu
Updated On : 6 May 2014, 12:59 pm

ಗದಗ: ಕರ್ನಾಟಕ ವಿದ್ಯಾವರ್ಧಕ ಸಮಿತಿಯ ಜ. ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ ಗದಗ 2013-14 ನೇ ಸಾಲಿನ ಬಿ.ಇಡಿ. ಪ್ರಥಮ ವರ್ಷದ ಶೈಕ್ಷಣಿಕ ಮನೋವಿಜ್ಞಾನದ ವ್ಯಕ್ತಿ ಅಧ್ಯಯನದ ದತ್ತಾಂಶ ಸಂಗ್ರಹಣೆಗಾಗಿ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಸೋಮವಾರ ಬೆಟಗೇರಿ ಮಂಜು ಶಿಕ್ಷಣ ಸಂಸ್ಥೆ ಬುದ್ಧಿಮಾಂದ್ಯ ಮಕ್ಕಳ ವಿಶೇಷ ವಸತಿಯುತ ಶಾಲೆಗೆ ಭೇಟಿ ನೀಡಿದರು.
ಮಂಜು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಶಂಕರಸಿಂಗ್ ರಜಪೂತ ಮಾತನಾಡಿ, 1995-96ರಲ್ಲಿ ಒಂದು ಸಣ್ಣ ಕಟ್ಟಡದಲ್ಲಿ 6 ಮಕ್ಕಳಿಂದ ಪ್ರಾರಂಭವಾಗಿ ಇಂದು 90 ಬುದ್ಧಿಮಾಂದ್ಯ ಮಕ್ಕಳು ನಮ್ಮ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 31 ವಿದ್ಯಾರ್ಥಿಗಳು ಯಶಸ್ವಿಯಾಗಿ ಹೊರಹೋಗಿದ್ದಾರೆ ಎಂದರು. ಮುಖ್ಯೋಪಾಧ್ಯಾಯ ವೀರೇಂದ್ರಸಿಂಗ್ ರಜಪೂತ ಮಾತನಾಡಿ, ಅನಾಥ ಮಗು ಎಲ್ಲಿಯಾದರೂ ಕಂಡುಬಂದರೆ ಅದನ್ನು ನಮ್ಮ ಸಂಸ್ಥೆಗೆ ಸೇರಿಸಿ ಎಂದು ವಿನಂತಿಸಿದರು.
ವಿಷಯ ಶಿಕ್ಷಕ ಎಚ್.ಡಿ. ಕೊಪ್ಪದ ಮಾತನಾಡಿ, ಬುದ್ಧಿಮಾಂದ್ಯ ಎಂದರೇನು? ಅದರ ಲಕ್ಷಣಗಳು, ಅದಕ್ಕೆ ಕಾರಣವಾದ ಅಂಶಗಳು, ಬುದ್ಧಿಮಾಂದ್ಯ ಮಕ್ಕಳ ವರ್ಗೀಕರಣ ಹಾಗೂ ಅವರನ್ನು ಹೇಗೆ ಪಾಠದತ್ತ ಕೇಂದ್ರಿಕರಿಸಬೇಕು ? ಅವರಿಗೆ ಶಿಕ್ಷಣವನ್ನು ಹೇಗೆ ನೀಡಬೇಕೆಂಬುದನ್ನು ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಂ.ಎಸ್. ಶಿರೋಳ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರೇವಣಸಿದ್ಧೇಶ್ವರಸ್ವಾಮಿ ಹಿರೇಮಠ, ಸ್ಥಳೀಯ ಚೇರಮನ್ ಬಸಣ್ಣ ಮಲ್ಲಾಡದ, ಪ್ರಾಚಾರ್ಯ ಬಿ.ಸಿ. ಉಪ್ಪಿನ ಇದ್ದರು. ಎಸ್.ವಿ. ಮಠ ಪ್ರಾರ್ಥಿಸಿದರು. ರಾಕೇಶ ಎಲ್.ಎಂ. ಸ್ವಾಗತಿಸಿದರು. ಎಲ್.ಬಿ. ಮುಳಗುಂದ ನಿರೂಪಿಸಿದರು. ಪಿ.ಎಂ. ಸಂಗನಾಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement