ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಸಾಪ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆ: ಕೆ.ವಿ. ಬಳಿಗೇರ

Mainashree
Updated On : 7 May 2014, 9:43 am

ಶಿರಹಟ್ಟಿ: ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ ಕಸಾಪ ಇಂದು ಸಮಸ್ತ ಆರು ಕೋಟಿ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆದು ಶತಮಾನೋತ್ಸವ ಸಂಭ್ರಮಾಚರಣೆಯತ್ತ ಸಾಗುತ್ತಿರುವುದು ಹೆಮ್ಮೆಯ ಬೆಳವಣಿಗೆಯಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಸೋಮವಾರ ಸಂಜೆ ಪಟ್ಟಣದಲ್ಲಿ ಆಯೋಜಿಸಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆ ಹಾಗೂ ಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಷತ್ತು ನಾಡು, ನುಡಿ ಹಾಗೂ ಸಂಸ್ಕೃತಿ ರಕ್ಷಣೆಗೆ ಮಹತ್ವದ ಕೊಡುಗೆ ನೀಡಿ ಕನ್ನಡಿಗರ ಅಂತರಂಗದ ತಂತುಗಳನ್ನು ಭಾವನಾತ್ಮಕವಾಗಿ ಒಂದುಗೂಡಿಸುವಲ್ಲಿ ಸಾರ್ಥಕವಾಗಿ ಕಾರ್ಯನಿರ್ವಹಿಸಿದೆ ಎಂದರು. ಪ್ರೊ. ಎಫ್.ಎಸ್. ಅಕ್ಕಿ ಮಾತನಾಡಿ, ಪರಿಷತ್ತು 99 ವರ್ಷಗಳಲ್ಲಿ ಕನ್ನಡಿಗರ ಅದೆಷ್ಟೋ ಅಶೋತ್ತರಗಳನ್ನು ಈಡೇರಿಸುವ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಪರಂಪರೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕಾರ್ಯ ಮಾಡಿದೆ ಎಂದರು. ಕೆ.ಎಫ್. ರಮಜಾನೆಯವರ ಜಗಜ್ಯೋತಿ ಬಸವಣ್ಣನವರ ವಚನಗಳಲ್ಲಿರುವ ಸಾಮಾಜಿಕ ಕಳಕಳಿ ಕುರಿತು ಉಪನ್ಯಾಸ ನೀಡಿದರು. ಬಿ.ಸಿ. ಮೇಟಿ, ಎಚ್.ಎಂ. ದೇವಗಿರಿ ಬಸವ ಜಯಂತಿ ಮಹತ್ವ ಕುರಿತು ಮಾತನಾಡಿದರು. ಬಸವರಾಜ ಹಲಸೂರ, ಸಿ.ಪಿ. ಕಾಳಗಿ, ಎಂ.ಪಿ. ಕಾಳಗಿ, ಬಸವರಾಜ ಭೋರಶೆಟ್ಟರ್, ಎಂ.ಕೆ. ದೇವನೂರ, ಮಂಜುನಾಥ ಪವಾಡಶೆಟ್ಟರ್ ಮತ್ತಿತರರು ಇದ್ದರು. ಜಿ.ಆರ್. ಸರ್ಜಾಪುರ ಸ್ವಾಗತಿಸಿದರು. ಎಂ.ಕೆ. ಲಮಾಣಿ ನಿರೂಪಿಸಿದರು. ಪ್ರಕಾಶ ಮಾಬಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement