ಸಮಾಜ ಸರಿದಾರಿಗೆ ತರುವ ದೇಗುಲ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 6
ಮನದ ಕ್ಲೇಶಗಳನ್ನು ದೂರಾಗಿಸಿ ಭಕ್ತರಿಗೆ ಮಾರ್ಗದರ್ಶನ ನೀಡುವ ನೆಮ್ಮದಿ ತಾಣ, ಧಾರ್ಮಿಕ, ಶ್ರದ್ಧಾ ಕೇಂದ್ರಗಳಾದ ದೇಗುಲಗಳ ಸುತ್ತಲಿನ ಪರಿಸರ ಸ್ವಚ್ಛವಾಗಿಡಲು ಭಕ್ತರು, ಆಡಳಿತ ಮಂಡಳಿ ಗಮನಹರಿಸುವಂತೆ ಮಾಜಿ ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ಸೋಮವಾರ ಪಟ್ಟಣದ ಬಸಾಪುರ ಓಣಿಯಲ್ಲಿ ನೂತನವಾಗಿ ನಿರ್ಮಿಸಿದ ದುರ್ಗಮ್ಮ, ದ್ಯಾಮವ್ವ ದೇವಿ ದೇವಸ್ಥಾನದ ವಾಸ್ತು ಶಾಂತಿ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಾಜ ಬಾಂಧವರು ದಾನ ಧರ್ಮಗಳ ಮೂಲಕ ಇಂತಹ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ದೇವಸ್ಥಾನಗಳನ್ನು ನಿರ್ಮಿಸುವ ಜೊತೆಗೆ ಅಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ಹೋಗುವಂತೆ ಮಾಡುವುದು ಅವಶ್ಯವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ ದೇವಸ್ಥಾನಗಳನ್ನು ನಿರ್ಮಿಸುವುದು ಸುಲಭ. ಅಲ್ಲಿನ ಪರಿಸರ ಬಗ್ಗೆ ನಿಷ್ಕಾಳಜಿ ವಹಿಸುವುದರಿಂದ ಅಲ್ಲಿನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಬಹುದಾಗಿದೆ ಎಂದರು.
ದಾನ ಮಾಡುವಾಗ ನಿಸ್ವಾರ್ಥದಿಂದ ಮಾಡಿದಾಗಲೆ ಅದು ಸಾರ್ಥಕವಾಗುತ್ತದೆ. ದೇವಸ್ಥಾನಗಳ ಬಗ್ಗೆ ಅಲ್ಲಿನ ಜನರು ಹೆಚ್ಚಿನ ಕಾಳಜಿ ವಹಿಸುವುದರಿಂದ ಮತ್ತು ಅಲ್ಲಿ ಯಾವುದೇ ತರಹದ ಚಟುವಟಿಕೆ ನಡೆಯದಂತೆ ನಿಗಾ ವಹಿಸುವುದು ಮುಖ್ಯವಾಗಿದೆ. ದ್ಯಾಮವ್ವ ಮತ್ತು ದುರ್ಗವ್ವ ಊರಿನ ಗ್ರಾಮದೇವತೆಗಳಾಗಿದ್ದು, ಅಂಥ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿದ ಇಲ್ಲಿನ ಜನರ ಕಾರ್ಯ ಮೆಚ್ಚುವಂಥದ್ದು ಎಂದರು.
ಸಾನ್ನಿಧ್ಯ ವಹಿಸಿದ್ದ ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿದ್ದರು. ಕರಬಸಯ್ಯನವರು ಕಲ್ಮಠ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್. ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ ಮ್ಯಾಗೇರಿ, ಶಿವನಗೌಡ್ರ ಪಾಟೀಲ, ಚಂಬಣ್ಣ ಬಾಳಿಕಾಯಿ, ಶಿದ್ಲಿಂಗಪ್ಪ ಮಾನ್ವಿ, ಗುರುನಗೌಡ್ರ ಪಾಟೀಲ, ಮಲ್ಲಪ್ಪ ಬಸಾಪುರ, ಶಿವರಾಯಪ್ಪ ಬಡಿಗೇರ, ಈರಪ್ಪ ಬಡಿಗೇರ, ಬಸಪ್ಪ ಬಳಗಾನೂರ, ಪ್ರಧಾನಪ್ಪ ಬಸಾಪುರ, ನೀಲಪ್ಪ ಗೋಡಿ, ಹನುಮಂತಪ್ಪ ಹೊಂಬಳ, ನಿಂಗಪ್ಪ ಕೋರಿ, ಸೋಮಣ್ಣ ಬಸಾಪುರ, ರಾಮಣ್ಣ ಬಳಗಾನೂರ, ರಾಮಣ್ಣ ರಿತ್ತಿ, ಪ್ರಧಾನೆಪ್ಪ ಟೋಕಾಳಿ, ಮಹೇಶ ಹೊಗೆಸೊಪ್ಪಿನ, ಅನಿಲ ಮುಳಗುಂದ, ಬಸಾಪುರ ಓಣಿ ನಿವಾಸಿಗಳು ಇದ್ದರು.