ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಸ್ ದರ ಏರಿಕೆ ಖಂಡಿಸಿ ಪ್ರತಿಭಟನೆ

Mainashree
Updated On : 8 May 2014, 10:37 am

ನರಗುಂದ: ರಾಜ್ಯ ಸರ್ಕಾರ ಬಸ್ ದರ ಏರಿಕೆ ಮಾಡಿರುವ ಕ್ರಮ ಖಂಡಿಸಿ ಬುಧವಾರ ಕಳಸಾ-ಬಂಡೂರಿ ಹೋರಾಟ ಸಮಿತಿ ಹಾಗೂ ಪಟ್ಟಣದ ಅಕ್ಕನ ಬಳಗದ ಸಂಯುಕ್ತವಾಗಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮಿನಿವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ರಾಜ್ಯದ 150ಕ್ಕೂ ಹೆಚ್ಚು ಗ್ರಾಮಗಳಲ್ಲಿ ಇಂದು ಜನತೆಗೆ ಮತ್ತು ಜಾನುವಾರಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿಗಳು ದಿಢೀರನೇ ಬಸ್ ದರ ಏರಿಕೆ ಮಾಡಿರುವ ಕ್ರಮ ಖಂಡನಾರ್ಹವಾಗಿದೆ. ಒಂದು ವರ್ಷದಲ್ಲಿ 2 ಬಾರಿ ಬಸ್ ದರ ಏರಿಕೆ ಮಾಡಿ ರಾಜ್ಯದ ಜನತೆ ಮೇಲೆ ಹೊರೆ ಹಾಕಿರುವುದು ಯಾವು ನ್ಯಾಯ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 1 ವರ್ಷ ಗತಿಸಿದರೂ ರಾಜ್ಯದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಇನ್ನೂ ಆಗಿಲ್ಲ. ಮೇಲಾಗಿ ಹಿಂದಿನ ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿದೇ ತಮಾಷೆ ಮಾಡುತ್ತಿರುವುದು ಒಂದಡೆಯಾದರೆ ದರ ಏರಿಕೆ ಮಾಡಿದ್ದನ್ನು ಬೇಗ ಹಿಂಪಡೆದುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ನೀಲಕ್ಕ ಹಸಿಬಿ, ರಾಜೇಶ್ವರಿ ವೀರನಗೌಡ್ರ, ಅಣ್ಣಪ್ಪಗೌಡ ಪಾಟೀಲ(ಮೂಗನೂರ), ಗಣೇಶ ಪಲ್ಯ, ಎಚ್.ಬಿ. ಬ್ಯಾಹಟ್ಟಿ, ಬಸಮ್ಮ ಐನಾಪುರ, ವೀರಪ್ಪ ಹಸಿಬಿ ಮುಂತಾದವರು ಇದ್ದರು.
ಜೈ ಭೀಮ ಸೇನಾ ಮನವಿ
ಗದಗ: ರಾಜ್ಯ ಸರ್ಕಾರವು ದಿಢೀರನೇ ಬಸ್ ದರವನ್ನು ಏರಿಕೆ ಮಾಡಿರುವ ಕ್ರಮವನ್ನು ಖಂಡಿಸಿ ಮಂಗಳವಾರ ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ವತಿಯಿಂದ ಗದಗ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜೈಭೀಮ ಸೇನೆಯ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಪರಾಪೂರ ಮಾತನಾಡಿ, ರಾಜ್ಯ ಸರ್ಕಾರ ದಿಢೀರನೆ ಬಸ್ ದರವನ್ನು ಹೆಚ್ಚಿಸಿ, ಬಡ ಹಾಗೂ ಪ್ರಯಾಣಿಕರಿಗೆ ಹೊರೆಯುನ್ನುಂಟು ಮಾಡಿದ್ದು ಖಂಡನೀಯ. ಈಗಾಗಲೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ನಿತ್ಯ ಬದುಕಿನ ದಿನಸಿಗಳ ದರ ಹೆಚ್ಚಿಸಿದ್ದು ಅಲ್ಲದೇ ಅಡುಗೆ ಅನಿಲ ಇಂಧನ ದರ ಹೆಚ್ಚಿಸಿ ಹೊರೆ ಅನುಭವಿಸುವ ಸಂದರ್ಭದಲ್ಲಿ ಗಾಯದ ಮೇಲೆ ಮತ್ತೊಂದು ಬರೆ ಎಳೆದು ಜನ ಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡಿದ್ದು, ಜಿಲ್ಲಾ ಜೈ ಭೀಮ ಸೇನೆಯು ತೀವ್ರವಾಗಿ ಖಂಡಿಸುತ್ತದೆ. ಬಸ್ ದರವನ್ನು ತಕ್ಷಣದಿಂದ ಕಡಿಮೆಗೊಳಿಸಬೇಕು. ತಪ್ಪಿದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹಲವು ರೂಪಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಅಧ್ಯಕ್ಷ ಗಣೇಶ ಹುಬ್ಬಳ್ಳಿ, ಉಪಾಧ್ಯಕ್ಷ ಮಂಜುನಾಥ ತೌಜಲು, ವಿಜಯ ಕಲ್ಮನಿ, ದೀಪಕ ಕಲ್ಮನಿ, ಪರಶುರಾಮ ಸಂಗಾಪುರ, ಓಬಳೇಶ ಯಶವಂತಪುರ, ಮಂಜುನಾಥ ಪರಾಪುರ, ಪರಶುರಾಮ ಸೀತಿಮನಿ, ಹನಮಂತ ಬಳ್ಳಾರಿ, ಹೇಮಂತ  ಹುಬ್ಬಳ್ಳಿ, ಪ್ರೇಮ ಹುಬ್ಬಳ್ಳಿ, ಮಂಜುನಾಥ ಪರಾಪುರ, ಬಸವರಾಜ ಬದಾಮಿ, ವಿರೂಪಾಕ್ಷ ಸಂಗಾಪುರ, ರಾಷ್ಟ್ರೀಯನ್ ಜೋಶೆಫ್, ಶಂಕರ ಹುಬ್ಬಳ್ಳಿ, ರಮೇಶ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement