ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೃಷಿ ಪತ್ತಿನ ಸಂಘಗಳಿಗೆ ಸಾಲ ಬಿಡುಗಡೆ: ಆಗ್ರಹ

Mainashree
Updated On : 9 May 2014, 10:46 am

ಕನ್ನಡಪ್ರಭ ವಾರ್ತೆ, ಗದಗ, ಮೇ 8
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೊಸ ಸಾಲ ಮತ್ತು ಹೆಚ್ಚುವರಿ ಸಾಲ ಬಿಡುಗಡೆಗೊಳಿಸಬೇಕು. ರೈತರಿಗೆ ಸಮರ್ಪಕ ಬೀಜ, ಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಗುರುವಾರ ರೈತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಧಾರವಾಡ ಕೆಸಿಸಿ ಬ್ಯಾಂಕಿಗೆ ಒಳಪಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 1 ವರ್ಷದಿಂದ ಹೊಸ ಸಾಲ ಮತ್ತು ಹೆಚ್ಚುವರಿ ಸಾಲ ಬಿಡುಗಡೆ ಮಾಡಿಲ್ಲ. ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಯೋಗ್ಯ ಧಾರಣೆ ಸಿಗದೇ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಜೂನ್‌ನಲ್ಲಿ ರೈತರು ಮುಂಗಾರು ಬಿತ್ತನೆ ಪ್ರಾರಂಭಿಸಬೇಕಾಗಿದ್ದು, ಬಿತ್ತನೆ ಬೀಜ-ಗೊಬ್ಬರ ಮುಂತಾದ ಸಲಕರಣೆಗಳಿಗಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ. ರೈತರಿಗೆ   ಸರ್ಕಾರ ಸಾಲ ಸೌಲಭ್ಯವಿಲ್ಲದೇ ಅನಿವಾರ್ಯವಾಗಿ ದುಬಾರಿ ಬಡ್ಡಿ ಸಾಲವನ್ನು ಖಾಸಗಿಯವರಲ್ಲಿ ಪಡೆದು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.
ಸರ್ಕಾರ 3-4 ದಿನಗಳಲ್ಲಿ ರೈತರಿಗೆ ಹೊಸ ಸಾಲ ಮತ್ತು ಹೆಚ್ಚುವರಿ ಸಾಲ ನೀಡಿ ರೈತರಿಗೆ ಅನುಕೂಲ ಕಲ್ಪಿಸಬೇಕು. ವಿಳಂಬ ಮಾಡಿದಲ್ಲಿ ಜಿಲ್ಲಾದ್ಯಂತ ರೈತರು ಹೋರಾಟಕ್ಕೆ ಇಳಿಯುವ ಪ್ರಸಂಗ ಬರುತ್ತದೆ. ಕೂಡಲೇ ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಬಿ.ಎಸ್. ಚಿಂಚಲಿ, ಕಾರ್ಯದರ್ಶಿ ಸಿ.ಎಂ. ಪಟ್ಟಣಶೆಟ್ಟಿ, ನಿಂಗಪ್ಪ ಮಣ್ಣೂರ, ಚನ್ನಬಸಪ್ಪ ಮಡಿವಾಳರ, ಈರಣ್ಣ ಕುರಡಗಿ, ಶರಣಬಸನಗೌಡ ಬಳ್ಳೊಳ್ಳಿ, ಲಕ್ಷ್ಮಣ ಉಳ್ಳಾಗಡ್ಡಿ, ಈರನಗೌಡ ಬಾಳನಗೌಡ, ಐ.ಆರ್. ಪರಕಾಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement