ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಾನವೀಯ ಸೇವೆಗೆ ರೆಡ್‌ಕ್ರಾಸ್ ಕೊಡುಗೆ ಅಪಾರ

Mainashree
Updated On : 9 May 2014, 10:46 am

ಕನ್ನಡಪ್ರಭ ವಾರ್ತೆ, ಗದಗ, ಮೇ 8
ಮಾನವೀಯ ಮನೋಭಾವದ ಸೇವಾ ಕಾರ್ಯಗಳಿಗೆ ವಿಶ್ವದಾದ್ಯಂತ ರೆಡ್‌ಕ್ರಾಸ್‌ನ ಕೊಡುಗೆ ಅಪಾರವಾಗಿದೆ ಎಂದು          ನಿವೃತ್ತ ಪ್ರಾಚಾರ್ಯ ಕೆ.ಎಚ್. ಬೇಲೂರ ಹೇಳಿದರು.
ಹೆನ್ರಿ ಡೊರಾಂಟ್ ಅವರ ಜನ್ಮದಿನಾಚರಣೆ ಹಾಗೂ ವಿಶ್ವ ರೆಡ್‌ಕ್ರಾಸ್‌ನ 151ನೇ ದಿನಾಚರಣೆ ಅಂಗವಾಗಿ ನಗರದ ರೆಡ್‌ಕ್ರಾಸ್ ಸೇವಾ ಭವನದಲ್ಲಿ ಜಿಲ್ಲಾ ರೆಡ್‌ಕ್ರಾಸ್ ಸಮಿತಿಯ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು. ಸಮರ್ಪಣ ಸೇವಾ ಕಾರ್ಯಗಳ ಮೂಲಕ ಯುದ್ಧಭೂಮಿ, ನೈಸರ್ಗಿಕ ಪ್ರಕೋಪಗಳ ಸಂದರ್ಭದಲ್ಲಿ ಪ್ರಾಂಜ್ಯಲ ಮನದ ಸೇವಾ ಕಾರ್ಯಕ್ಕೆ ರೆಡ್‌ಕ್ರಾಸ್ ಸಂಸ್ಥೆ ಪ್ರಾಮುಖ್ಯ ನೀಡುವ ಮೂಲಕ ವಿಶ್ವದಾದ್ಯಂತ ಜನಮಣ್ಣನೆಗೆ ಪಾತ್ರವಾಗಿದೆ. ನಿಸ್ವಾರ್ಥ ಸೇವೆಯನ್ನೇ ಗುರಿಯನ್ನಾಗಿರಿಸಿಕೊಂಡು ದೇಶ, ವಿದೇಶಗಳಲ್ಲಿ ಜರುಗಿದ ಹಲವಾರು ಭಾರಿ ಅವಘಡಗಳ ಸಂದರ್ಭದಲ್ಲಿ ಸೇವಾ ಕಾರ್ಯಕ್ಕೆ ಸನ್ನದ್ಧರಾಗುವ ಮೂಲಕ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಕರ್ತರು ಸಮೃದ್ಧ ನಾಡು ಕಟ್ಟುವ ಕಾರ್ಯಕ್ಕೆ ಸಮರ್ಪಿತರಾಗಿದ್ದಾರೆ. ಸುಮಾರು 151 ವರ್ಷಗಳ ಹಿಂದೆಯೇ ಸೇವೆಗೆ ಸಮರ್ಪಿತವಾಗುವಂತಹ ತಂಡವೊಂದನ್ನು ಕಟ್ಟುವ ಕನಸನ್ನು ಸಾಕಾರಗೊಳಿಸಿ ಇಂದು ಪ್ರಪಂಚದಾದ್ಯಂತ ಉತ್ತಮ ಸೇವಾ ಮನೋಭಾವದ ತಂಡ ರಚಿಸಿದ ಕೀರ್ತಿ ಹೆನ್ರಿ ಅವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಆರ್.ಎನ್. ಗೋಡಬೋಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ಉಪಾಧ್ಯಕ್ಷ ಡಾ. ಬಿ.ಎಂ. ಆಲೂರ, ನಾರಾಯಣ ಇಲ್ಲೂರ, ಜಿಲ್ಲಾ ವಿಕಲಾಂಗ ಪುನರ್ವಸತಿ ಕೇಂದ್ರದ ಅಧಿಕಾರಿ ಡಿ.ಎನ್. ಮೂಲಿಮನಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement