ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಸಾಪಕ್ಕೆ 100: ಕನ್ನಡಿಗರ ಹೆಮ್ಮೆ

Vishwanath S
Updated On : 10 May 2014, 11:42 am

ನರೇಗಲ್ಲ: 99 ವರ್ಷಗಳನ್ನು ಸಮರ್ಪಕವಾಗಿ ಪೂರೈಸಿರುವ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಕಸಾಪ ಇಂದು ಶತಮಾನೋತ್ಸವದಲ್ಲಿ ಕಾಲಿರಿಸುತ್ತಿರುವದು ಕನ್ನಡಿಗರಿಗೆಲ್ಲರಿಗೂ ಹೆಮ್ಮೆಯ ತರುವ ವಿಚಾರವಾಗಿದೆ ಎಂದು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಸಿ.ಜಿ. ಹುಡೇದಗಡ್ಡಿ ಹೇಳಿದರು.
ಅವರು ಪಟ್ಟಣದ ಕಸಾಪ ಕಾರ್ಯಾಲಯದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕದ ಏಕೀಕರಣದ ಕಾಲದಿಂದಲೂ ಸಾಹಿತ್ಯ ಪರಿಷತ್ತು ತನ್ನದೇ  ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುತ್ತ ಬಂದಿದೆ. 99 ವರ್ಷಗಳ ಇತಿಹಾಸದಲ್ಲಿ ಕಸಾಪ ಸಾಕಷ್ಟು ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಮೂಲಕ ಗ್ರಾಮ ಮಟ್ಟದಲ್ಲಿಯೂ ಕನ್ನಡದ ಕಂಪನ್ನು ಪಸರಿಸುವಲ್ಲಿ ಪರಿಷತ್ತು ತನ್ನ ಕಾಣಿಕೆ ನೀಡಿದೆ ಎಂದರು.
ಶಿಕ್ಷಕ ಎಂ.ಎಸ್. ದಡೇಸೂರಮಠ ವಿಶೇಷ ಉಪನ್ಯಾಸ ನೀಡಿ, ಪುಸ್ತಕ ಇದ್ದರೆ ಮಾತ್ರ ಮಸ್ತಕ ಎನ್ನುವ ರೀತಿಯಲ್ಲಿ ಕನ್ನಡ ಪುಸ್ತಕಗಳ ಪ್ರಕಟಣೆಯಲ್ಲಿ ಸಾಹಿತ್ಯ ಪರಿಷತ್ತು ಮಹತ್ವದ ಕಾರ್ಯವನ್ನು ಮಾಡುತ್ತಿದೆ. ಇದರಿಂದ ಅತ್ಯಂತ ಸುಲಭದ ಬೆಲೆಯಲ್ಲಿ ಕನ್ನಡಿಗರಿಗೆ ಹಿರಿಯ ಲೇಖಕರ ಪುಸ್ತಕಗಳನ್ನು ಓದುವ ಭಾಗ್ಯವನ್ನು ಪರಿಷತ್ತು ಒದಗಿಸಿಕೊಟ್ಟಿದೆ ಎಂದರು.
ಕರವೇ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಡಾ. ಶಿವರಾಜ ಗುರಿಕಾರ ಮಾತನಾಡಿದರು. ಜಿಲ್ಲಾ ಸಲಹಾ ಸಮಿತಿ ಸದಸ್ಯ ಸುರೇಶ ಹಳ್ಳಿಕೇರಿ ಸ್ವಾಗತಿಸಿದರು. ತಾಲೂಕು ಕಸಾಪದ ಕೋಶಾಧ್ಯಕ್ಷ ಕೆ.ಎಸ್. ಕಳಕೊಣ್ಣವರ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement