ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮನೆಗಳಿಗೆ ಚರಂಡಿ ನೀರು: ಪ್ರತಿಭಟನೆ

Vishwanath S
Updated On : 10 May 2014, 11:41 am

ಗಜೇಂದ್ರಗಡ: ಸಮೀಪದ ರಾಜೂರು ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘ ಬಳಿಯ ರಸ್ತೆಗೆ ಸಮರ್ಪಕ ಕೆಳ ಸೇತುವೆ ಇಲ್ಲದ್ದರಿಂದ ಮಳೆ ನೀರು ಜತೆ ಚರಂಡಿ ಕೊಳಚೆ ಮನೆಗಳಿಗೆ ನುಗ್ಗಿ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವುದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪುರ್ತಗೇರಿ ಮತ್ತು ರಾಜೂರು ಗ್ರಾಮ ವ್ಯಾಪ್ತಿಯ ಹೊಲಗಳಿಂದ ಅಪಾರ ಪ್ರಮಾಣ ಮಳೆ ನೀರು ಗ್ರಾಮ ಪ್ರವೇಶಿಸುತ್ತದೆ. ಈ ನೀರು ಸರಾಗವಾಗಿ ಹರಿಯಲು ಎರಡು ಕಿರು ಸೇತುವೆ ನಿರ್ಮಾಣ ಅಪೂರ್ಣವಾಗಿವೆ. ಸುತ್ತಲಿನ ಬಡಾವಣೆಗಳು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿವೆ. ಇದರಿಂದ ರಸ್ತೆ ದಾಟಲು ಜನ ಹರಸಾಹಸ ಪಡಬೇಕಾಗಿದೆ. ಕೆಲ ವೃದ್ಧರು, ಮಹಿಳೆಯರು, ಮಕ್ಕಳು ರಸ್ತೆಯಲ್ಲಿ ನಿರ್ಮಾಣವಾಗಿರುವ ಕೊಳಚೆ ಗುಂಡಿಯಲ್ಲಿ ಬಿದ್ದು ಆಸ್ಪತ್ರೆ ಸೇರಿದ್ದಾರೆ. ಇನ್ನೂ ಕೆಲ ರೋಗ ಪೀಡಿತರಾಗಿ ಬಳಲುತ್ತಿದ್ದಾರೆ. ಆದರೆ, ಗ್ರಾಪಂ ಆಡಳಿತ ಮಾತ್ರ ನಮಗೇನು ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಗ್ರಾಮದಲ್ಲಿ ನೈರ್ಮಲ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಿವಾಸಿಗಳ ನರಕಯಾತನೆ ಯಾರೂ ಕೇಳುವವರಿಲ್ಲದಂತಾಗಿದೆ. ತೆಗ್ಗು, ದಿಣ್ಣೆಗಳಿಂದ ಕೂಡಿದ್ದು, ಜನಸಾಮಾನ್ಯರು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ಅಪಾದಿಸಿದರು.
ಗ್ರಾಮದ ಕಾಲಕಾಲೇಶ್ವರ ವೃತ್ತದಿಂದ ಕೊಡಗಾನೂರು ಗ್ರಾಮಕ್ಕೆ ಸಂಚರಿಸುವ ಒಳರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಅಳವಡಿಸಲಾಗಿದೆ. ಇದಕ್ಕೆ ರು. 98 ಲಕ್ಷ ಬಿಡುಗಡೆಯಾಗಿದೆ. ಆದರೆ, ರಸ್ತೆಯಿಂದ ಗ್ರಾಮ ಪ್ರವೇಶಿಸುವ ಸೇವಾಲಾಲ ಬಡಾವಣೆಯಿಂದ ಹಾಲು ಉತ್ಪಾದಕರ ಸಂಘ ಸಂಚಾರ ಮಧ್ಯೆ ಸೇತುವೆ ಇಲ್ಲದ್ದರಿಂದ ಅಲ್ಲಿ ಹೊಂಡ ಸ್ವರೂಪ ಕೊಳಚೆ ಶೇಖರಣೆಯಾಗಿದೆ. ರಸ್ತೆ ದಾಟಲು ಹೋಗಿ ಹೊಂಡದಲ್ಲಿ ಬಿದ್ದು ಕೈ, ಕಾಲು ಮುರಿದುಕೊಂಡಿದ್ದಾರೆ. ಗ್ರಾಮಸ್ಥರು ಬಿದ್ದು ಆಸ್ಪತ್ರೆ ಸೇರಿದ್ದರು. ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯಸಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಗ್ರಾಪಂದವರು ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಕಳಕೇಶ ಉಕ್ಕಿಸಲ, ಗ್ರಾಪಂ ಸದಸ್ಯ ಶಿವುಕುಮಾರ ಜಾಧವ, ಪ್ರಭು ಮಾಟರಂಗಿ, ಮಲ್ಲಪ್ಪ ಮಾಟರಂಗಿ, ಮೈಲಾರಪ್ಪ ಕಾತರಾಳ, ನುರಪ್ಪ ರಾಠೋಡ, ಪಡಿಯಪ್ಪ ಚವ್ಹಾಣ, ಮಲ್ಲಪ್ಪ ಕಾತರಾಳ, ತೆಕ್ಕಪ್ಪ ರಾಠೋಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement