ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಂಗಕಲೆ ಭಾವ ವಿಕಾಸಕ್ಕೆ ನಾಂದಿ

Vishwanath S
Updated On : 10 May 2014, 11:42 am

ಗದಗ: ರಂಗಕಲೆ ಪ್ರೇಕ್ಷಕರ ಮನಸ್ಸನ್ನು ತಿಳಿಗೊಳಿಸುತ್ತದೆ. ಭಾವ ವಿಕಾಸಕ್ಕೆ ಬುನಾದಿಯಾಗಿದೆ ಎಂದು ಯುವ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.
ನಗರದ ಉಸುಗಿನಗಟ್ಟಿ ಓಣಿಯ ಗಂಜಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಜರುಗಿದ ಭಗವಂತ ಕೊಟ್ಟ ಭಾಗ್ಯ ಎಂಬ ನಾಟಕ ಪ್ರದರ್ಶನ ಉದ್ಘಾಟಿಸಿ, ಮಾತನಾಡಿದರು.
ರಾಮಣ್ಣ ಫಲದೊಡ್ಡಿ, ಡಾ. ಎಸ್.ಆರ್. ಹಿರೇಮಠ, ವಿರೂಪಾಕ್ಷಗೌಡ್ರ ದೇಸಾಯಿಗೌಡ್ರ, ಸಂಘಟಕ ಎಚ್.ಕೆ. ಮುಲ್ಲಾ, ಈರಣ್ಣ ಕರಭಿಷ್ಠಿ, ಎಫ್.ವಿ. ಮರಿಗೌಡ್ರ ಮಾತನಾಡಿದರು. ನಾಗೇಶ ಬೂದಿಹಾಳ ಅಧ್ಯಕ್ಷತೆ ವಹಿಸಿದ್ದರು. ಜಾತ್ರಾ ಕಮಿಟಿಯ ಬಸಯ್ಯ ಹಿರೇಮಠ, ಪ್ರಭು ಕಲಬಂಡಿ, ಮಂಜುನಾಥ ಲಕ್ಕುಂಡಿ, ಶಂಕರ ಕರಬಿಷ್ಠಿ, ಲಿಂಗರಾಜ ಕೆಂಭಾವಿಮಠ, ಭರಮಗೌಡ್ರ ಉಮಚಗಿ, ಈರಪ್ಪ. ಮುಳ್ಳಾಳ ಅವರನ್ನು ಸನ್ಮಾನಿಸಲಾಯಿತು.
ಬಸವರಾಜ ಶಾಬಾದಿಮಠ, ಬಾಬಣ್ಣ ಶಾಬಾದಿಮಠ, ಉಳವಪ್ಪ ಹೊಂಬಳ, ರಜಾಕ ಡಂಕೇದ, ನಾಗಪ್ಪ ಗುಗ್ಗರಿ, ವೀರಣ್ಣ ಗಡಿಗಿಶೆಟ್ಟರ, ಪ್ರಭು ಕಲಬಂಡಿ, ಗುರುಶಾಂತಗೌಡ ಮರಿಗೌಡ್ರ, ಉಮೇಶ ಮುಳ್ಳಾಳ, ಬಸಪ್ಪ ಹಿರೇಮಠ, ಸೋನರಾಜ ಜೈನ್, ಶಾಬಾದಿಮಠ, ಪುರತ ಕಮತರ, ಜೆ.ಬಿ. ಹಾವಣಗಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement