ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

Mainashree
Updated On : 12 May 2014, 10:05 am

ನರಗುಂದ: ಸಂಘ-ಸಂಸ್ಥೆ, ಮಠ ಮಾನ್ಯಗಳ ಆಶ್ರಯದಲ್ಲಿ ಜರಗುತ್ತಿರುವ ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವಲ್ಲಿ ಸಹಕಾರಿಯಾಗಿದೆ ಎಂದು ಶಾಸಕ ಬಿ.ಆರ್. ಯಾವಗಲ್ ಹೇಳಿದರು.
ಅವರು ತಾಲೂಕಿನ ಶಿರೋಳ ಗ್ರಾಮದಲ್ಲಿ ತೋಂಟದಾರ್ಯ ಮಠದ ಗುರುಬಸವ ಶ್ರೀಗಳ ಪಟ್ಟಾಧಿಕಾರದ ರಜತ ಮಹೋತ್ಸವ ಹಾಗೂ ಅನುಷ್ಠಾನ ಮಂಗಲ ಪ್ರಯುಕ್ತ ಈಚೆಗೆ ಜರುಗಿದ ಸಾಮೂಹಿಕ ವಿಹಾಹ ಸಮಾರಂಭದಲ್ಲಿ ಮಾತನಾಡಿದರು. ಸಮಾಜದಲ್ಲಿ ಕುಟುಂಬದ ಮುಖ್ಯಸ್ಥರು ಮಕ್ಕಳ ವಿವಾಹ ಮಾಡಲು ಸಾಲ ಮಾಡುವ ಪ್ರಸಂಗವಿದೆ. ಇದರಿಂದಾಗಿ ಹಲವು ಕುಟುಂಬಗಳು ಇಂದಿಗೂ ಸಾಲದ ಸುಳಿಗೆ ಸಿಕ್ಕು ನಲಗುತ್ತಿರುವ ಪ್ರಸಂಗ ನಾವು ಇಂದಿಗೂ ಕಾಣಸಿಗುತ್ತಿರುವುದು ನೋವಿನ ಸಂಗತಿ. ಇಂತಹ ದಿನಗಳಲ್ಲಿ ಮಠ-ಮಾನ್ಯಗಳು, ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಗ್ರಾಮದ ಎಲ್ಲ ಸಮಾಜ ಬಾಂಧವರು ಒಂದು ಗೂಡಿ ಒಂದೇ ವೇದಿಕೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನಾ ಕಾರ್ಯವಾಗಿದೆ ಎಂದರು. ಶಿರೋಳ-ಚಿಂಚಲ ತೋಂಟದಾರ್ಯ ಮಠದ ಗುರುಬಸವ ಶ್ರೀಗಳು, ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಮುಂತಾದವರು ಆಶೀರ್ವಚನ ನೀಡಿದರು. ಬೆಳಗಾವಿ ರುದ್ರಾಕ್ಷಿಮಠದ ಶಿವಯೋಗಿ ದೇವರು, ವೀರಯ್ಯ ಹಿರೇಮಠ, ವಿ.ಪಿ. ಹಿರೇಮಠ, ರುದ್ರಯ್ಯ ಹಿರೇಮಠ, ಬೆಂಗಳೂರಿನ ಡಾ. ಚಂದ್ರಶೇಖರ ಸಾಂಬ್ರಣೆ, ಪ್ರಕಾಶಗೌಡ ತಿರಕನಗೌಡ್ರ, ನಾಗನಗೌಡ ತಿಮ್ಮನಗೌಡ್ರ, ಗುರುಬಸವ ಶಲ್ಲಿಕೇರಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement