ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭಕ್ತಸಾಗರ ಮಧ್ಯೆ ಫಕೀರೇಶ್ವರ ರಥೋತ್ಸವ

Mainashree
Updated On : 15 May 2014, 9:58 am

ಶಿರಹಟ್ಟಿ: ಉತ್ತರ ಕರ್ನಾಟಕದ ಐತಿಹಾಸಿಕ ಜಾತ್ರೆಗಳಲ್ಲೊಂದಾದ ಶಿರಹಟ್ಟಿಯ ಜ. ಫಕೀರೇಶ್ವರ ರಥೋತ್ಸವ ಬುಧವಾರ ಜನಸಾಗರದ ಮಧ್ಯೆ ಸಂಭ್ರಮದಿಂದ ನಡೆಯಿತು. ಸಹಸ್ರಾರು ಭಕ್ತ ಕೋಟಿಯ ಜಯಕಾರದ ಮಧ್ಯೆ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು.
ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಜ. ಫಕೀರ ಸಿದ್ಧರಾಮ ಸ್ವಾಮೀಗಳ ನೇತೃತ್ವದಲ್ಲಿ ರಥವನ್ನು ಸಂಜೆ 6ಕ್ಕೆ ಭಕ್ತ ಸಮೂಹ ಕಿ.ಮೀ. ದೂರದವರೆಗೆ ಸಾಗಿಸಿದ ಭಕ್ತರು ಪಾದಗಟ್ಟೆ ತಲುಪಿ ಮತ್ತೆ ಪೂರ್ವ ಸ್ಥಳಕ್ಕೆ ತಂದರು. ರಥೋತ್ಸವದಲ್ಲಿ ಡೊಳ್ಳು ಕುಣಿತ, ಝಾಂಜ್ ಮೇಳ, ಹೆಜ್ಜೆ ಮೇಳ, ನಂದಿ ಕೋಲು, ವಾಧ್ಯ ಮೇಳ ಮನ ಸೂರೆಗೊಂಡವು.
ರಥೋತ್ಸವದಲ್ಲಿ ನೆರೆದಿದ್ದ ಭಕ್ತ ಸಮೂಹ ಉತ್ತತ್ತಿ, ಪೇರಲ, ಬಾಳೆಹಣ್ಣು ಎಸೆದು ಫಕೀರೇಶ್ವರ ಮಹಾರಾಜ ಕೀ ಜೈ, ಹರಹರ ಮಹಾದೇವ ಎಂಭ ಜಯಘೋಷ ಹಾಕಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿರಹಟ್ಟಿ ಸಂಸ್ಥಾನ ಮಠದ 13 ನೇ ಪಟ್ಟಾಧ್ಯಕ್ಷರಾದ ಶ್ರೀ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿಗಳ ಪಲ್ಲಕ್ಕಿ ಉತ್ಸವ ನಡೆಸಿದರು.
ಜನರ ಬದುಕು ಹಸನಾಗಿರಲಿ: ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ, ದೇವರ ಕೃಪೆಯಿಂದ ಈ ವರ್ಷ ನಾಡಿನ ಎಲ್ಲ ಜನರ ಬದುಕು ಹಸನಾಗಿರಲಿ, ಮಳೆ, ಬೆಳೆ ಚೆನ್ನಾಗಿ ಬಂದು ಜನತೆ ಮನೆ-ಮನ ಬೆಳಗುವಂತಾಗಲಿ ಎಂದು ಹರಸಿದರು. ರಥೋತ್ಸವದಲ್ಲಿ ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಮಾಜಿ ಶಾಸಕ ಎಸ್.ಎನ್. ಪಾಟೀಲ, ರಾಮಣ್ಣ ಲಮಾಣಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈ.ಎಸ್. ಪಾಟೀಲ, ಚಂದ್ರಕಾಂತ ನೂರಶೆಟ್ಟರ್, ಬಸಲಿಂಗಪ್ಪ ಕಪ್ಪತ್ತನವರ, ಲೋಕೇಶ ದೊಡ್ಡಮನಿ, ಪರಮೇಶಿ ಪರಬ, ಎಂ.ಕೆ. ಲಮಾಣಿ, ನಜೀರ ಡಂಬಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement