ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಿರುಪಯುಕ್ತ ಸಮುದಾಯ ಶೌಚಾಲಯ

Mainashree
Updated On : 18 May 2014, 10:08 am

ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ನರಗುಂದ, ಮೇ 17
ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿ ನೈರ್ಮಲ್ಯ ಕಾಪಾಡಬೇಕೆಂದು ಪ್ರತಿ ವರ್ಷ ಸಾವಿರಾರು ಕೋಟಿ ರು. ಶೌಚಾಲಯಕ್ಕೆ ಖರ್ಚು ಮಾಡುತ್ತಿವೆ. ಆದರೆ ಪಟ್ಟಣದ ಕುರಬರ ಓಣಿ, ದಂಡಾಪುರ, ಅಂಬೇಡ್ಕರ್ ನಗರದ ನಿವಾಸಿಗಳಿಗೆ ಅನುಕೂಲವಾಗಲೆಂದು ಕರ್ನಾಟಕ ಕೊಳಚ ನಿರ್ಮೂಲನಾ ಮಂಡಳಿವರು ರು. 185.90 ಲಕ್ಷ ವೆಚ್ಚದಲ್ಲಿ ಪಟ್ಟಣದ ಮುನವಳ್ಳಿ ರಸ್ತೆ ಪಕ್ಕದಲ್ಲಿ ನಿರ್ಮಿಸಲಾದ ಸಮುದಾಯದ ಶೌಚಾಲಯ ಉಪಯೋಗಕ್ಕಿಲ್ಲದೇ ಬಿದ್ದು ಹೋಗುತ್ತಿದೆ.
ನಿರ್ಲಕ್ಷ ಏಕೆ?: ಸಾಕಷ್ಟು ಪ್ರಮಾಣದ ಹಣ ವಿನಿಯೋಗಿಸಿ ನಿರ್ಮಾಣ ಮಾಡಲಾಗಿರುವ ಈ ಶೌಚಾಲಯದ ಬಗ್ಗೆ ಅದೇಕೆ ಪುರಸಭೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೊ ಗೊತ್ತಿಲ್ಲ. ಆದರೆ ನಗರದ ಕುರಬರ ಓಣಿಯಲ್ಲಿರುವ ಈ ಸಮುದಾಯ ಶೌಚಾಲಯ ಇದ್ದರೂ ಆ ಪ್ರದೇಶದ ಮಹಿಳೆಯರು ಇಂದಿಗೂ ಬಯಲು ಶೌಚಾಲಯ ಆಶ್ರಯಿಸುವಂತಾಗಿದೆ. ಶೌಚಾಲಯಕ್ಕೆ ಸರಿಯಾದ ನೀರಿನ ವ್ಯವಸ್ಥೆ ಹಾಗೂ ನಿರ್ವಹಣೆ ಕೈಗೊಳ್ಳುವಲ್ಲಿ ಪುರಸಭೆ ಏಕೆ ನಿರ್ಲಕ್ಷ್ಯ ಮಾಡುತ್ತಿದೆಯೋ ಅವರೇ ಉತ್ತರಿಸಬೇಕು.
ಕೀಡಗೇಡಿಗಳಿಂದ ಹಾನಿ: ಶೌಚಾಲಯಕ್ಕೆ ಪುರಸಭೆಯವರು ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಪೂರೈಕೆ ಮಾಡದೇ ಇರುವುದರಿಂದ ಅದು ಹಾನಿಯಾಗುತ್ತಿದೆ. ಅದರಲ್ಲಿಯೂ ಕೆಲ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿಯೇ ಆ ಶೌಚಾಲಯಕ್ಕೆ ಸಂಪರ್ಕ ಕಲ್ಪಿಸುವ ಪೈಪ್ ಲೈನ್, ಕಟ್ಟಡ ಮೇಲಿರುವ ನೀರಿನ ಟ್ಯಾಂಕರ್‌ಗಳು ಸೇರಿದಂತೆ ಬಹುತೇಕ ವಸ್ತುಗಳನ್ನು ಒಡೆದು ಹಾಕಿದ್ದು, ಪುರಸಭೆಯವರು ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿಸಿದಲ್ಲಿ ಸ್ವಲ್ಪ ದಿನದಲ್ಲಿ ಅದು ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement