ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಂತರ್ಜಾತಿ ವಿವಾಹಕ್ಕೆ ಆರ್ಥಿಕ ನೆರವು

Lingaraj Badiger
Updated On : 19 May 2014, 11:45 am

ಗದಗ: ಅಂತರ್ಜಾತಿಯ ವಿವಾಹವನ್ನು 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ವಿವಾಹ ಮಾಡಿ ಜಗತ್ತಿಗೆ ಮಾದರಿಯಾದರು. ಅಂದೇ ದಲಿತರಿಗೆ ಸಮಪಾಲು, ಸಮಬಾಳು ಕೊಟ್ಟ ಮಹಾನ ಮಾನವತಾವಾದಿ. ಇಂದು ಸರ್ಕಾರ ಪ್ರೋತ್ಸಾಹಧನ ನೀಡಿ ಅಂತರ್ಜಾತಿಯ ವಿವಾಹ ನಡೆಯಲಿಕ್ಕೆ ಅನುಕೂಲ ಮಾಡಿಕೊಟ್ಟಿದೆ. ಬಸವಣ್ಣನವರ ಮಾರ್ಗವೇ ಅಂತರ್ಜಾತಿಯ ವಿವಾಹಕ್ಕೆ ದಾರಿದೀಪವಾಗಿದೆ ಎಂದು ನಗರಸಭೆ ಸದಸ್ಯೆ ಕಮಲಾ ಹಾದಿಮನಿ ಹೇಳಿದರು.
ಅವರು ಸ್ಥಳೀಯ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಈಚೆಗೆ ಅಂತರ್ಜಾತಿಯ ವಿವಾಹವಾದ ಮಂಜುನಾಥ ತೆಲಗಾವಿ ಮತ್ತು ನಿವೇದಿತಾ ವೀರಭದ್ರಪ್ಪ ಕವಲೂರು ಅವರಿಗೆ ಸರ್ಕಾರದ ವತಿಯಿಂದ ಸಹಾಯಧನದ ಚೆಕ್ ವಿತರಿಸಿ ಮಾತನಾಡಿರು. ಇಬ್ಬರು ಸತಿಪತಿಗಳು ಸಮಾಜದಲ್ಲಿ ಒಳ್ಳೆಯ ರೀತಿ ಬದುಕು ಸಾಗಿಸಬೇಕು. ನಿಮ್ಮ ಸಂಬಂಧ ಹಾಲು ಜೇನು ಆಗಿರಲಿ ಸರ್ಕಾರದಿಂದ ಸಹಾಯ, ನಿಮ್ಮ ಬದುಕು ಹಸನುವಾಗಲೆಂದು ಜೋಡಿಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ. ಹೆಬ್ಬಳ್ಳಿ ಮಾತನಾಡಿ, ಅಂತರ್ಜಾತಿಯ ವಿವಾಹದ ಫಲಾನುಭವಿಗಳು ಸರ್ಕಾರದ ಧನಸಹಾಯದಿಂದ ಆರ್ಥಿಕ ಮಟ್ಟ ಸ್ವಲ್ಪ ಮಟ್ಟಿಗೆ ನಿಮ್ಮ ಬಾಳಿಗೆ ಬೆಳಕಾಗಲಿ. ನಿಮ್ಮ ಸಂಬಂಧ ಒಳ್ಳೆಯ ಸಂಬಂಧವಾಗಲಿ ಸಮಾಜದಲ್ಲಿ ನಿಮ್ಮ ಬದುಕು ಹಸನವಾಗಲೆಂದು ಮಾರ್ಮಿಕವಾಗಿ ಹೇಳಿದರು. ಪ್ರಥಮ ದರ್ಜೆ ಸಹಾಯಕ ಮಂಜುಳಾ ಸೋಮಕ್ಕನವರ, ಮಾರ್ತಾಂಡಪ್ಪ ಹಾದಿಮನಿ, ಮಂಜುನಾಥ ತೆಲಗಾವಿ ಮತ್ತು ನಿವೇದಿತಾ ತೆಲಗಾಗಿ ಹಾಗೂ ಸಮಾಜ ಕಲ್ಯಾಣ ಸಿಬ್ಬಂದಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement