ಬೆಂಗಳೂರು ಚೆಲೋ ನಾಳೆ
ಗದಗ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20ರಂದು ಬೆಂಗಳೂರಿನಲ್ಲಿ ಅನಿರ್ಧಿಷ್ಟ ಸಾಮೂಹಿಕ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, 19ರಂದು ಸಂಜೆ 4ಕ್ಕೆ ನಗರದ ನಗರಸಭೆ ಕಾಲೇಜು ಆವರಣದಲ್ಲಿ ಸೇರಿ ಅಲ್ಲಿಂದ ಬೆಂಗಳೂರಿಗೆ ತೆರಳಲಿದ್ದು, ದಿನಗೂಲಿ ನೌಕರರು ಪಾಲ್ಗೊಳ್ಳಬೇಕೆಂದು ತಿಳಿಸಲಾಗಿದೆ.
ಇಂದು ಯೋಗ ನಿಬಂಧ ಸ್ಪರ್ಧೆ
ಗದಗ: ಯಳಂದೂರು ಬಸವಲಿಂಗಶ್ರೀಗಳವರ ಸ್ಮಾರಕ ಯೋಗ ಪಾಠ ಶಾಲೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ 20 ವರ್ಷ ಮೇಲ್ಪಟ್ಟ ಯೋಗಾಸಕ್ತ ಸ್ತ್ರೀ-ಪುರುಷರಿಗೆ ಯೋಗ ಬಂಧ ಸ್ಪರ್ಧೆ ಏರ್ಪಡಿಸಿದೆ. ಆರೋಗ್ಯ ಭಾಗ್ಯಕ್ಕೆ ಅಷ್ಟಾಂಗ ಯೋಗ ವಿಷಯವಾಗಿ 45 ನಿಮಿಷಗಳಲ್ಲಿ ಬರೆಯಬೇಕು. ಸ್ಪರ್ಧೆ ಗದಗ ಸಿದ್ಧಲಿಂಗ ನಗರದ ಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿರುವ ಬಸವ ಯೋಗ ಮಂದಿರದಲ್ಲಿ ಮೇ 19ರಂದು ಬೆಳಗ್ಗೆ 10.30ರಿಂದ 11.15ರವರೆಗೆ ನಡೆಯಲಿದೆ. ವಿಜೇತರಾದವರಿಗೆ ನಗದು ಬಹುಮಾನವಿದೆ. ಪ್ರವೇಶ ಉಚಿತವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಸಂಯೋಜಕ ಕೆ.ಎಸ್. ಪಲ್ಲೇದ, ಬಸವ ಯೋಗ ಮಂದಿರ ಸಿದ್ಧಲಿಂಗ ನಗರ ಗದಗ, ದೂ. 9448317188 ಸಂಪರ್ಕಿಸಲು ಕೋರಲಾಗಿದೆ.
ಮೋಹನಗೌಡ ನಿಧನ
ಮುಂಡರಗಿ: ತಾಲೂಕಿನ ಡಂಬಳ ಗ್ರಾಮದ ಜೈನ ಸಮಾಜದ ಹಿರಿಯರು, ಪ್ರಗತಿಪರ ರೈತರಾದ ಮೋಹನಗೌಡ ಅನಂತಗೌಡ ಪಾಟೀಲ (59) ಭಾನುವಾರ ನಿಧನರಾದರು. ಮೃತರು ತಾಯಿ, ಪತ್ನಿ, ಪುತ್ರ, ಅಪಾರ ಬಂಧುಗಳಿದ್ದಾರೆ. ಜ.ಡಾ. ತೋಂಟದ ಸಿದ್ಧಲಿಂಗ ಶ್ರೀಗಳು, ಮುಖಂಡರು ಸಂತಾಪ ಸೂಚಿಸಿದ್ದಾರೆ.