ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೋಳಿವಾಡ ವಿರುದ್ಧ ದೂರು: ಸುಂಕದ

Lingaraj Badiger
Updated On : 21 May 2014, 11:48 am

ಗದಗ: ಸಲೀಂ ಅಹ್ಮದ ಅವರ ಸೋಲಿನ ನಂತರ ರಾಣೆಬೆನ್ನೂರ ಶಾಸಕ ಕೆ.ಬಿ. ಕೊಳಿವಾಡ ನೀಡಿರುವ ಹೇಳಿಕೆ ಖಂಡನಾರ್ಹವಾದದ್ದು, ಅವರಲ್ಲಿನ ಜಾತಿ ವಾದಿತನ, ಮುಸ್ಲಿಂರ ಮತಗಳನ್ನು ಕೇವಲ ಓಟ್ ಬ್ಯಾಂಕ್ ಬಳಸಿಕೊಳ್ಳುವ ತಂತ್ರಗಾರಿಕೆಯ ವಿರುದ್ಧ ಶೀಘ್ರದಲ್ಲಿ ಪಕ್ಷದ ಹೈಕಮಾಂಡ್‌ಗೆ ದೂರು ನೀಡುವಾಗುವುದು ಎಂದು ರಾಜ್ಯ ಮುಸ್ಲಿಂ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಪರೀದ್‌ಅಹ್ಮದ ಸುಂಕದ ಹೇಳಿದರು.
ಅವರು ಮಂಗಳವಾರ ನಗರದ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಲ್ಪ ಸಂಖ್ಯಾತರಿಗೆ ಟಿಕೆಟ್ ನೀಡಬಾರದು ಎಂದು ನಾವು ಮೊದಲೇ ಹೇಳಿದ್ದೆವು. ಈ ಕುರಿತು 7 ಜನ ಶಾಸಕರು ಸಹಿ ಮಾಡಿದ ಪತ್ರವನ್ನು ಹೈಕಮಾಂಡ್ ನೀಡಿದ್ದೆವು, ಆದರೆ ಪಕ್ಷದ ವರಿಷ್ಠರು ಇದನ್ನು ಗಮನಸದೇ ಅಲ್ಪ ಸಂಖ್ಯಾತರಿಗೆ ಟಿಕೆಟ್ ನೀಡಿದ್ದೇ ಸೋಲಿಗೆ ಕಾರಣ ಎನ್ನುವ ಹೇಳಿಕೆ ನೀಡಿದ್ದು, ಕೋಳಿವಾಡ ಸೇರಿದಂತೆ ಕಾಂಗ್ರೆಸ್ 7 ಜನ ಶಾಸಕರ ಬಣ್ಣ ಬಯಲಾಗಿದೆ.
ಇವರೆಲ್ಲಾ ಅಲ್ಪ ಸಂಖ್ಯಾತರನ್ನು ಕೇವಲ ಓಟ್ ಬ್ಯಾಂಕ್‌ಗಾಗಿ ಬಳಕೆ ಮಾಡಿಕೊಂಡು ಯಾವುದೇ ಕಾರಣಕ್ಕೂ ಬೆಳೆಯಲು ಬಿಡಬಾರದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಈ ಕುರಿತು ನಾವು ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡಿ, ಈ ರೀತಿ ಅಲ್ಪ ಸಂಖ್ಯಾತ ವಿರೋಧಿ ನೀತಿಯನ್ನು ಅನುಸರಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದರು.
ಸಮಿತಿಯ ಪದಾಧಿಕಾರಿ ನಿಸ್ಸಾರ್ ಅಹ್ಮದ ಖಾಜಿ, ರಾಜ್ಯ ಖಜಾಂಚಿ ಸಿರಾಜ್‌ಅಹ್ಮದ ಖಾಜಿ, ಜಾವೇದ ಸುಂಕದ, ಎಚ್.ಕೆ. ಮುಲ್ಲಾ, ಸುಲೇಮಾನ ಮಕಾನದಾರ, ಖಾದರಸಾಬ ಬನ್ನೂರ, ಇಸ್ಮಾಯಿಲ್ ಮುಲ್ಲಾ, ಮುಸ್ತಾಕ ಮನಿಯಾರ್, ಬಾಪುಸಾಬ ಕಿಲ್ಲೇದಾರ, ರಾಜೇಸಾಬ ಅಣ್ಣಿಗೇರಿ, ತೌಸಿಪ್ ಅಹ್ಮದ, ನಜೀರ್ ಅಹ್ಮದ, ಎಂ.ಡಿ. ಸವದತ್ತಿ, ಎಂ.ಐ. ಮುಲ್ಲಾ, ಬಾಬಾಜಾನ ಶಿರಹಟ್ಟಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement