ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೀರು ಪೋಲಾಗ್ತಿದೆ, ತಪ್ಪಿಸ್ತೀರಾ?

Lingaraj Badiger
Updated On : 21 May 2014, 11:43 am

- ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಮೇ 20
ದಯವಿಟ್ಟು ನನ್ನನ್ನು ಒಮ್ಮೆ ನೋಡಿ. ನಾನು ನಿಮ್ಮ ಪಟ್ಟಣದಲ್ಲಿಯೆ ಹೀಗೆ ಅನಾಥವಾಗಿ ಸುರಿಯುತ್ತಿರುವ ನೀರು ನಾ. ನೀರು ನೀರಿಲ್ಲವೆಂದು ಬಾಯಿ ಬಡಿದುಕೊಳ್ಳುತ್ತಿರುವ ನೀವು ನನ್ನ ಮುಂದೆಯೇ ಹಾದಾಡುತ್ತಿದ್ದರೂ ನಿಮ್ಮ ಕಣ್ಣಿಗೆ ಬೀಳದೆ ಇರುವದು ಅತ್ಯಂತ ನೋವಿನ ಸಂಗತಿ.
ಹೌದು, ನಾನು ನರೇಗಲ್ಲ ಪಟ್ಟಣದ ಹಳೆ ಬಸ್ ನಿಲ್ದಾಣದ ಮೂಲಕ ಹಾಯ್ದು ಹೋಗುವ ಗಜೇಂದ್ರಗಡ ರಾಜ್ಯ ಹೆದ್ದಾರಿಯ ಮೇಲೆ ವಿಶ್ವಚೇತನ ಪ್ರೌಢಶಾಲೆಗೆ ಹೋಗುವ ಕ್ರಾಸ್‌ನಲ್ಲಿದ್ದೇನೆ. ನನ್ನನ್ನು ಮುನ್ಸಿಪಾಲ್ಟಿ ನಲ್ಲಿ ಎಂದು ಕರೆಯುತ್ತಾರೆ. ಪಟ್ಟಣ ಪಂಚಾಯ್ತಿಯವರು ನನ್ನನ್ನು ಇಲ್ಲಿ ನಿಲ್ಲಿಸಿ, ಎರಡೂ ಕಡೆಗಳಲ್ಲಿಯೂ ನನ್ನ ಬಾಯಿ ತೆರೆಯಿಸಿ, ಈ ಸಾರ್ವಜನಿಕರಿಗೆಲ್ಲ ನೀರು ಕುಡಿ ಎಂದು ನಿಲ್ಲಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ನಾನು ಇಲ್ಲಿನ ಜನರ ಸೇವೆಯನ್ನು ಕಾಯಾ, ವಾಚಾ, ಮನಸಾ ಮಾಡುತ್ತಿದ್ದೇನೆ. ಈಗ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ವೈಯಕ್ತಿವಾಗಿ ನಲ್ಲಿಯ ಜೋಡಣೆಯನ್ನು ಪಡೆದಿರುವದರಿಂದ ನನ್ನ ಕಡೆಗೆ ಹೊರಳಿ ನೋಡುವವರು ಯಾರೂ ಇಲ್ಲ. ಅದೇ ಆಗ ನಾನು ಹೊಸತಾಗಿ ಬಂದಾಗ ನನ್ನನ್ನು ನೋಡಲೆಂದು, ನಾನು ಯಾವಾಗ ಬಾಯಿ ತೆರೆದು ನೀರು ಉಗುಳಿಯೇನೋ ಎಂದು ಸಮಯ ಮೀರಿ ಸಾಲುಗಟ್ಟಿ ನಿಲ್ಲುತ್ತಿದ್ದ ಸಾರ್ವಜನಿಕರು, ಬಾಲೆಯರು, ಮಹಿಳೆಯರು ಎಲ್ಲರೂ ಕಣ್ಮರೆಯಾಗಿದ್ದಾರೆ. ಹೀಗಾಗಿ ನಾನೀಗ ಒಂಟಿಯಾಗಿದ್ದೇನೆ. ಯಾರಿಗೂ ಬೇಡವಾಗಿದ್ದೇನೆ.
ನಾನು ಬೇಡವಾದರೆ ಬಿಡಲಿ. ನನಗೇನೂ ನಷ್ಟವಿಲ್ಲ. ನಷ್ಟವಿರುವದೆಲ್ಲ ನಿಮಗೆ. ನನ್ನ ಮೂಲಕ ನರೇಗಲ್ಲ ಪಟ್ಟಣದೊಳಕ್ಕೆ ಹರಿದು ಬರುವ ನೀರನ್ನು ಹೀಗೆ ಹರಿಯಬಿಟ್ಟಿರುವಿರಲ್ಲ ನನ್ನ ಶಾಪ ನಿಮಗೆ ಖಂಡಿತ ತಟ್ಟಿದೆ. ಅದನ್ನು ನೀವೀಗ ಅನುಭವಿಸುತ್ತಿದ್ದೀರಿ. ವ್ಯರ್ಥವಾಗಿ ಹರಿಯುತ್ತಿರುವ ನೀರು ಪೋಲಾಗುತ್ತಿರುವದನ್ನು ಕಂಡು ನನ್ನ ಕಣ್ಣಲ್ಲಿ ನೀರು ಬರುತ್ತಿದೆ.
ಮಹನೀಯರೆ, ಮಹಿಳೆಯರೆ ಇನ್ನಾದರೂ ಎಚ್ಚರಗೊಳ್ಳಿ. ಪಪಂ ಬಿಡಿ, ನೀವಾದರೂ ನನ್ನ ಬಾಯಿಗೆ ಬಿರಡೆ ಹಾಕಿ ಪ್ಲೀಜ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement